ಕ್ರೇಜಿಸ್ಟಾರ್ ರವಿಚಂದ್ರನ್ ಅನೇಕ ವರ್ಷಗಳಿಂದ ಕನ್ನಡ ಚಲನಚಿತ್ರರಂಗದಲ್ಲಿ ನಟ ನಿರ್ಮಾಪಕ ನಿರ್ದೇಶಕ ಸಂಗೀತ ನಿರ್ದೇಶಕ ಆಗಿ ಮಿಂಚುತ್ತಿರುವ ಬಹುಮುಖ ಕಲಾವಿದ. ಕನ್ನಡ ಚಲನ ಚಿತ್ರರಂಗದಲ್ಲಿ ಕಲರ್ಫುಲ್ ಮೇಕಿಂಗ್ ಎಂದ ಕೂಡಲೇ ಎಲ್ಲರ ಮನಸ್ಸಿಗೆ ಬರುವುದು ಕ್ರೇಜಿಸ್ಟಾರ್ ರವಿಚಂದ್ರನ್.ಇಂತಹ ಕ್ರಿಯೇಟಿವ್ ಕಲಾವಿದ ರವಿಚಂದ್ರನ್ ಅವರಿಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಬಂದಿದ್ದು ಇದುವರೆಗೂ ಸಹ ಡಾಕ್ಟರೇಟ್ ಗೌರವ ಮಾತ್ರ ಬಂದಿರಲಿಲ್ಲ.
ಇನ್ನು ಚಿತ್ರರಂಗದ ಹಲವಾರು ಕಲಾವಿದರಿಗೆ ಗೌರವ ಡಾಕ್ಟರೇಟ್ ಬರುತ್ತಿದೆ ರವಿ ಸರ್ ಅವರಿಗೆ ಯಾವಾಗ ಬರುತ್ತೆ ಅಂತ ಸಿನಿ ಪ್ರೇಕ್ಷಕರು ಅಂದುಕೊಂಡಿದ್ದು ನಿಜ. ಇನ್ನು ಅವರ ಅಭಿಮಾನಿಗಳ ಆಸೆ ಇದೀಗ ಈಡೇರಿದ್ದು ರವಿಚಂದ್ರನ್ ಅವರಿಗೆ ಸಿಎಂಆರ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಅನ್ನು ನೀಡಲಿದೆ. ಹೌದು ನವೆಂಬರ್ 3 ರಂದು ಸಿಎಂಆರ್ ಯುನಿವರ್ಸಿಟಿ ವಿ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ.