‘ಕಿರಿಕ್ ಪಾರ್ಟಿ’ ಸಿನಿಮಾದ ಯಶಸ್ಸಿನ ನಂತರದಲ್ಲಿ ತೆಲುಗು, ತಮಿಳು, ಹಿಂದಿ ಭಾಷೆಯ ಸ್ಟಾರ್ ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆಯುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಲವ್, ಮದುವೆ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಈಗ ವಿಜಯ್ ದೇವರಕೊಂಡ ಅವರು ರಶ್ಮಿಕಾಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಒಂದು ಜಾಹೀರಾತಿಗೋಸ್ಕರ ವಿಜಯ್ ದೇವರಕೊಂಡ ಅವರು ರಶ್ಮಿಕಾ ಮಂದಣ್ಣ ಮುಂದೆ ಮಂಡಿಯೂರಿ ಕುಳಿತು ಪ್ರೇಮ ನಿವೇದನೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ತಿಳಿ ಗುಲಾಬಿ ಬಣ್ಣದ ಉಡುಗೆಯಲ್ಲಿ ರಶ್ಮಿಕಾ ತೂಗುಮಂಚದ ಮೇಲೆ ಕುಳಿತಿರುತ್ತಾರೆ. ಆಗ ವಿಜಯ್ ದೇವರಕೊಂಡ ಅವರು ಉಂಗುರ ಹಿಡಿದು ಮಂಡಿಯೂರಿ ಕುಳಿತು ಪ್ರೇಮ ನಿವೇದನೆ ಮಾಡುತ್ತಾರೆ. ಈ ವಿಡಿಯೋ ರಶ್ಮಿಕಾ, ವಿಜಯ್ ಅಭಿಮಾನಿಗಳಿಗೆ ತುಂಬ ಖುಷಿಕೊಟ್ಟಿದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಈಗಾಗಲೇ ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅದರಲ್ಲೂ ‘ಗೀತ ಗೋವಿಂದಂ’ ಚಿತ್ರ ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇನ್ನು ಆ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಅವರಿಬ್ಬರ ಕೆಮಿಸ್ಟ್ರಿ ಕೂಡ ಹಿಟ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರದ ತುಣುಕುಗಳು ವೈರಲ್ ಆಗಿದ್ದವು.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಕೆಲ ಬಾರಿ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಬಿದ್ದಾಗ ಅವರಿಬ್ಬರು ಡೇಟ್ ಮಾಡುತ್ತಿದ್ದಾರೆ, ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ‘ಅರ್ಜುನ್ ರೆಡ್ಡಿ’ ಸಿನಿಮಾ ನಂತರದಲ್ಲಿ ವಿಜಯ್ ದೇವರಕೊಂಡ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿಕೊಂಡರು. ರಶ್ಮಿಕಾಗೂ ಕೂಡ ತೆಲುಗಿನಲ್ಲಿ ರಾಶಿ ರಾಶಿ ಫ್ಯಾನ್ಸ್ ಇದ್ದಾರೆ. ಇವರಿಬ್ಬರು ಮದುವೆಯಾದರೆ ಚೆನ್ನ ಅಂತ ಕೂಡ ಕೆಲವರು ಹೇಳಿದರು.