ಮೂರು ದಿನಗಳ ಹಿಂದೆ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕುಕ್ಲೂರು ಗ್ರಾಮದಲ್ಲಿರುವ ರಶ್ಮಿಕಾ ಮಂದಣ್ಣ ಅವರ ನಿವಾಸ, ಕಚೇರಿ, ಕಲ್ಯಾಣಮಂಟಪ ಸೇರಿದಂತೆ ಮತ್ತಿತರ ಕಡೆ ಆದಾಯ ತೆರಿಗೆ ಅಧಿಕಾರಿಗಳ ಎರಡು ತಂಡ ದಾಳಿ ನಡೆಸಿತ್ತು. ನೋಟೀಸ್ ಕೊಟ್ಟಿದ್ದು ನೋಟಿಸ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ,
ನಮ್ಮಿಂದ ಯಾವುದೇ ರೀತಿಯ ತಪ್ಪಾಗಿಲ್ಲ. ಆಸ್ತಿ ವಿವರಗಳೆಲ್ಲವೂ ಕಾನೂನು ಬದ್ದವಾಗಿಯೇ ಇವೆ. ನಾವು ಕಾಲಕಾಲಕ್ಕೆ ತೆರಿಗೆಯನ್ನೂ ಸಹ ಪಾವತಿ ಮಾಡಿದ್ದೇವೆ. ರಶ್ಮಿಕಾ ಮಂದಣ್ಣ ಚೆಕ್ ಮೂಲಕವೇ ಸಂಭಾವನೆ ಪಡೆಯುತ್ತಿದ್ದಾಳೆ. ನೋಟಿಸ್ ತಲುಪಿದ್ದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.