ರಸ್ತೆ ಮಧ್ಯೆ ಲಾರಿ ಯಾಕಪ್ಪ ನಿಲ್ಲಿಸಿದ್ದೀಯಾ ಎಂದವರಿಗೆ ಹಿಗ್ಗಾಮುಗ್ಗಾ ಥಳಿತ !

Date:

ಕಲಬುರ್ಗಿ:- ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಪ್ರಕರಣಗಳು ಜಾಸ್ತಿ ಆಗುತ್ತಿದೆ. ಅದರಂತೆ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದನ್ನು ಪ್ರಶ್ನಿಸಿದಕ್ಕೆ ಯುವಕರ ಮೇಲೆ ಹಲ್ಲೆ ಮಾಡಿರುವ ಘಟನೆ ಪಟ್ಟಣದ ಕೋಡ್ಲಾ ಕ್ರಾಸ್ ಬಳಿ ರಸ್ತೆ ಮಧ್ಯೆ ಸಂಭವಿಸಿದೆ.

ಹಲ್ಲೆಗೊಳಗಾದವರು ರಘು ರಡ್ಡಿ ಮತ್ತು ರಾಹುಲ್​ ರೆಡ್ಡಿ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ. ಮೆಹಬೂಬ್‌, ಸ್ನೇಹಿತರಾದ ಸೈಯದ್, ಸಲ್ಮಾನ್, ಶೇಖ್‌ ಹಲ್ಲೆ ಮಾಡಿದವರು ಎನ್ನಲಾಗಿದೆ. ರಘು ರೆಡ್ಡಿ ಹಾಗೂ ರಾಹುಲ್‌ ರೆಡ್ಡಿ ಗ್ಯಾರೇಜ್ ನಡೆಸುತ್ತಿದ್ದರು. ಮೆಹಬೂಬ್‌ ಪಟೇಲ್‌ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದನು. ರಾಹುಲ್ ರೆಡ್ಡಿ ಬೈಕ್ ಮೇಲೆ ಹೋಗುವಾಗ ಲಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.

ಬಳಿಕ ರಾಹುಲ್​ ರೆಡ್ಡಿ ಲಾರಿಯನ್ನು ರಸ್ತೆ ಮಧ್ಯದಲ್ಲಿ ಏಕೆ ನಿಲ್ಲಿಸಿರುವೆ ಎಂದು ಮೇಹಬೂಬ್​ ಪಟೇಲ್​ನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮೇಹಬೂಬ್ ಪಟೇಲ್ “ನಾನು ಲಾರಿ ಎಲ್ಲಿ ಬೇಕಾದರೂ ನಿಲ್ಲಿಸುತ್ತೇನೆ ನಿನ್ಯಾವನೋ ಕೇಳವನು” ಅಂತ ಅವಾಜ್ ಹಾಗಿದ್ದಾನೆ. ಬಳಿಕ ರಾಹುಲ್​ ಅವರಿಗೆ ಮೇಹಬೂಬ್ ಪಟೇಲ್ ಅವಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಇಬ್ಬರ ಮಧ್ಯೆ ಗಲಾಟೆ ವಿಚಾರ ತಿಳಿದು ರಾಹುಲ್ ಸಹೋದರ ರಘು ಸ್ಥಳಕ್ಕೆ ಬಂದಿದ್ದಾನೆ. ನಂತರ ಮೇಹಬೂಬ್ ಪಟೇಲ್ ಸ್ನೇಹಿತರಾದ ಸೈಯದ್ ಸುಲ್ತಾನ್, ಸಲ್ಮಾನ್ ಪಟೇಲ್, ಮೇಹಬೂಬ್ ಪಟೇಲ್, ಶೇಖ್ ಸಮೀರ್ ಸ್ಥಳಕ್ಕೆ ಬಂದು ಸಾರ್ವಜನಿಕವಾಗಿ ಏಕಾ ಎಕಿ ಸಹೋದರ ಮೇಲೆ ಹಲ್ಲೆ ಮಾಡಿದ್ದಾರೆ. ಯುವಕರ ಮೇಲೆ ಹಲ್ಲೆ ಮಾಡಿದ ವಿಡಿಯೋ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಾಳು ರಘು ರೆಡ್ಡಿಯನ್ನು ಕಲಬುರಗಿಯಲ್ಲಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Share post:

Subscribe

spot_imgspot_img

Popular

More like this
Related

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ:...

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ ಭೇಟಿ

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ...

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್...

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.!

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.! ಸೀತಾಫಲ (Custard Apple)...