ರಹಾನೆ ನಾಯಕತ್ವ ಗುಣಗಾನ ಮಾಡಿದ ಪಾಂಟಿಂಗ್

Date:

ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವವನ್ನು ಹಲವು ಕ್ರಿಕೆಟ್‌ ದಿಗ್ಗಜರು ಗುಣಗಾನ ಮಾಡಿದ್ದಾರೆ. ಇದೀಗ ಈ ಸಾಲಿಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಕೂಡ ಸೇರ್ಪಡೆಯಾಗಿದ್ದಾರೆ.

ಪಂತ್‌ ಹಾಗೂ ಪೂಜಾರ ವಿಕೆಟ್‌ ಬೀಳುತ್ತಿದ್ದಂತೆ ಭಾರತಕ್ಕೆ ಸೋಲಿನ ಭೀತಿ ಎದುರಾಗಿತ್ತು. ಆದರೆ, ಆರ್‌ ಅಶ್ವಿನ್‌ ಹಾಗೂ ಹನುಮ ವಿಹಾರಿ ಜೋಡಿ ಆಸ್ಟ್ರೇಲಿಯಾ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿ ಮೂರನೇ ಪಂದ್ಯ ಡ್ರಾ ಮಾಡಿಸುವಲ್ಲಿ ಯಶಸ್ವಿಯಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ರಿಕಿ ಪಾಂಟಿಂಗ್‌, ಹನುಮ ವಿಹಾರಿ ಬದಲು ರಿಷಭ್‌ ಪಂತ್‌ ಆಡಿಸಿದ್ದು ‘ಮಾಸ್ಟರ್‌ ಸ್ಟ್ರೋಕ್’ ಎನ್ನುವ ಮೂಲಕ ರಹಾನೆ ನಿರ್ಧಾರವನ್ನು ಶ್ಲಾಘಿಸಿದರು.

“ರಿಷಭ್‌ ಪಂತ್‌ ಅವರನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸಿದ್ದು ರಹಾನೆ ಅವರ ಅತ್ಯುತ್ತಮ ನಿರ್ಧಾರ. ಎಡಗೈ ಬ್ಯಾಟ್ಸ್‌ಮನ್‌ ಅಬ್ಬರದ ಆಟದಿಂದ ಭಾರತದ ಪಾಳಯದಲ್ಲಿ ಗೆಲುವುನ ಆಸೆ ಚಿಗುರಿತ್ತು. ಇದರ ನಡುವೆ ನಾಯಕ ಟಿಮ್‌ ಪೇಯ್ನ್‌ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಪಂತ್‌ ಪಾಲಿಗೆ ಅದೃಷ್ಠವಾಗಿತ್ತು,” ಎಂದು ಹೇಳಿದರು.

ಗಾಯದ ನಡುವೆಯೂ ಅದ್ಭುತ ಬ್ಯಾಟಿಂಗ್‌ ಮಾಡಿದ ಪಂತ್‌, ಆಸ್ಟ್ರೇಲಿಯಾದ ಸ್ಪಿನ್ನರ್‌ ನೇಥನ್‌ ಲಯಾನ್‌ಗೆ ಮೂರು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅಲ್ಲದೆ, ಚೇತೇಶ್ವರ್‌ ಪೂಜಾರ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 148 ರನ್‌ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದ್ದರು. ಆದರೆ, ಮೂರು ರನ್‌ ಅಂತರದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಶತಕ ವಂಚಿತರಾದರು.

“ನೇಥನ್‌ ಲಯಾನ್ ಬೌಲಿಂಗ್‌ನಲ್ಲಿ ರಿಷಭ್‌ ಪಂತ್‌ ಬ್ಯಾಟಿಂಗ್‌ ನಿಜಕ್ಕೂ ಅದ್ಭುತವಾಗಿತ್ತು. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಆಟಗಾರರೂ ಕೂಡ ಎಡಗೈ ಬ್ಯಾಟಿಂಗ್‌ ಬಗ್ಗೆ ಗುಣಗಾನ ಮಾಡಿದ್ದಾರೆ. ಮುಂದಿನ 10 ರಿಂದ 12 ವರ್ಷಗಳ ಕಾಲ ಟೀಮ್‌ ಇಂಡಿಯಾ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಆಗಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಪಂತ್‌ಗೆ ಇದು ಉತ್ತಮ ಅವಕಾಶವೆಂದು ಸರಣಿ ಆರಂಭಕ್ಕೂ ಮೊದಲೇ ಹೇಳಿದ್ದೆ. ಆದರೆ, ನಾನು ಹೇಳಿದ ರೀತಿ ಅವರು ಐದನೇ ದಿನ ಬ್ಯಾಟಿಂಗ್ ಮಾಡಿದ್ದಾರೆ,” ಎಂದರು.

“ನೇಥನ್‌ ಲಯಾನ್ ಬೌಲಿಂಗ್‌ನಲ್ಲಿ ರಿಷಭ್‌ ಪಂತ್‌ ಬ್ಯಾಟಿಂಗ್‌ ನಿಜಕ್ಕೂ ಅದ್ಭುತವಾಗಿತ್ತು. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಆಟಗಾರರೂ ಕೂಡ ಎಡಗೈ ಬ್ಯಾಟಿಂಗ್‌ ಬಗ್ಗೆ ಗುಣಗಾನ ಮಾಡಿದ್ದಾರೆ. ಮುಂದಿನ 10 ರಿಂದ 12 ವರ್ಷಗಳ ಕಾಲ ಟೀಮ್‌ ಇಂಡಿಯಾ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಆಗಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಪಂತ್‌ಗೆ ಇದು ಉತ್ತಮ ಅವಕಾಶವೆಂದು ಸರಣಿ ಆರಂಭಕ್ಕೂ ಮೊದಲೇ ಹೇಳಿದ್ದೆ. ಆದರೆ, ನಾನು ಹೇಳಿದ ರೀತಿ ಅವರು ಐದನೇ ದಿನ ಬ್ಯಾಟಿಂಗ್ ಮಾಡಿದ್ದಾರೆ,” ಎಂದರು.

ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಜ. 15ರಿಂದ ಆರಂಭವಾಗಲಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...