ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಟೀಮ್ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಅಜಿಂಕ್ಯ ರಹಾನೆ ಓರ್ವ ಹುಟ್ಟು ನಾಯಕ ಎಂದು ಇಯಾನ್ ಚಾಪೆಲ್ ಹೇಳಿದ್ದಾರೆ.
ಇಯಾನ್ ಚಾಪೆಲ್ ಅಜಿಂಕ್ಯ ರಹಾನೆಯನ್ನು ಧೈರ್ಯಶಾಲಿ ಬುದ್ಧಿವಂತ ಹಾಗೂ ಶ್ರೇಷ್ಠ ನಾಯಕ ಎಂದು ಪ್ರಶಂಸಿಸಿದ್ದಾರೆ. ಇದೇ ಸಂದರ್ಭದಲ್ಲಿ ಎಂಸಿಜಿಯಲ್ಲಿ 8 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಟೀಮ್ ಇಂಡಿಯಾ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ತನಗೆ ಅಚ್ಚರಿಯಾಗಲಿಲ್ಲ ಎಂದಿದ್ದಾರೆ ಇಯಾನ್ ಚಾಪೆಲ್.
ಟೀಮ್ ಇಂಡಿಯಾ ಎರಡನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ರೋಹಿತ್ ಶರ್ಮಾ ಇಲ್ಲದೆ ಕಣಕ್ಕಿಳಿದಿತ್ತು. ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಉಮೇಶ್ ಯಾದವ್ ಕೂಡ ಗಾಯಗೊಂಡು ಹೊರಗುಳಿದಿದ್ದರು. ಹಾಗಿದ್ದರೂ ರಹಾನೆ ಹಾಗೂ ಅವರ ತಂಡ ಅದ್ಭುತವಾಗಿ ಪ್ರದರ್ಶನವನ್ನು ನೀಡಿ 8 ವಿಕೆಟ್‌ಗಳಿಂದ ಗೆಲುವನ್ನು ಸಾಧಿಸಿತ್ತು.
ಎಂಸಿಜಿ ಗೆಲುವು ಅಚ್ಚರಿಯಾಗಲಿಲ್ಲ
‘ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಟೀಮ್ ಇಂಡಿಯಾ ದೋಷರಹಿತವಾಗಿ ಆಡಿದ್ದು ನನಗೆ ಅಚ್ಚರಿಯನ್ನು ಮೂಡಿಸಲಿಲ್ಲ. 2017ರಲ್ಲಿ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮುನ್ನಡೆಸಿದಾಗ ನೋಡಿದ ಯಾರಾದರೂ ಆತನನ್ನು ಹುಟ್ಟು ನಾಯಕ ಎಂದು ಒಪ್ಪಿಕೊಳ್ಳುತ್ತಾರೆ. 2017ರ ಧರ್ಮಶಾಲಾ ಪಂದ್ಯಕ್ಕೂ ಎಂಸಿಜಿಯಲ್ಲಿ ನಡೆದ 2ನೇ ಪಂದ್ಯಕ್ಕೂ ಸಾಕಷ್ಟು ಸಾಮ್ಯತೆಗಳು ಇದೆ’ ಎಂದು ಇಯಾನ್ ಚಾಪೆಲ್ ಹೇಳಿದ್ದಾರೆ.
ಧರ್ಮಶಾಲಾದಲ್ಲಿ ನಡೆದ ಒಂದು ಘಟನೆ ರಹಾನೆ ನಾಯಕತ್ವದ ಬಗ್ಗೆ ಹೆಚ್ಚು ಆಕರ್ಷಿಸುವಂತೆ ಮಾಡಿತ್ತು. ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಜೋಡಿ ಶತಕದ ಜೊತೆಯಾಟವನ್ನು ಆಡುತ್ತಿದ್ದರು. ಆಗ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದ್ದ ಕುಲ್‌ದೀಪ್ ಯಾದವ್ ಕೈಗೆ ರಹಾನೆ ಚೆಂಡನ್ನು ನೀಡಿದ್ದರು. ಅದು ನಿಜಕ್ಕೂ ಅತ್ಯಂತ ಧೈರ್ಯಶಾಲಿ ನಿರ್ಧಾರವಾಗಿತ್ತು. ಕುಲ್‌ದೀಪ್ ಯಾದವ್ ಈ ವೇಳೆ ಡೇವಿಡ್ ವಾರ್ನರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು ಈ ಮೂಲಕ ತಂಡಕ್ಕೆ ಮುನ್ನಡೆಯನ್ನು ಒಗದಿಸಿದರು’ ಎಂದು ಚಾಪೆಲ್ ಅಜಿಂಕ್ಯ ರಹಾನೆ ನಾಯಕತ್ವದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.