ಸಂಭ್ರಮದ ಕೇಕ್ ಕತ್ತರಿಸಲ್ಲ ಅಂದಿದ್ದೇಕೆ ರಹಾನೆ?

Date:

ಭಾರತದ ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಭಾರತೀಯ ಕ್ರಿಕೆಟ್‌ನಲ್ಲಿ ಹೆಚ್ಚು ಗೌರವಾನ್ವಿತ ವ್ಯಕ್ತಿ. ಅದಕ್ಕೆ ಮುಖ್ಯ ಕಾರಣ ಅವರ ನಡೆ-ನುಡಿ. ಅನೇಕ ಸಾರಿ ರಹಾನೆ ತನ್ನ ಅತ್ಯುತ್ತಮ ನಡೆಗಾಗಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಿದೆ. ರಹಾನೆ ಈಗಲೂ ಬೇರೆ ಬೇರೆ ಕಾರಣಕ್ಕಾಗಿ ಕ್ರೀಡಾಪ್ರೇಮಿಗಳ ಮನ ಗೆಲ್ಲುತ್ತಲೇ ಇದ್ದಾರೆ. ಇಂದು ಮತ್ತೊಂದು ವಿಚಾರಕ್ಕೆ ರಹಾನೆ ಕ್ರಿಕೆಟ್ ಪ್ರೇಮಿಗಳ ಹೃದಯಕ್ಕೆ ತಾಗಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುತೂಹಲಕಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ತಂಡ ತವರಿಗೆ ಆಗಮಿನಿಸಿತ್ತು. ಟೆಸ್ಟ್ ಸರಣಿ ಗೆಲುವಿನ ವೇಳೆ ಭಾರತಕ್ಕೆ ಅಜಿಂಕ್ಯ ರಹಾನೆ ನಾಯಕರಾಗಿದ್ದರು.

ಎಂದಿನ ನಾಯಕ ವಿರಾಟ್ ಕೊಹ್ಲಿ ಅನುಪಷ್ಥಿತಿಯಲ್ಲಿದ್ದರಿಂದ ನಾಯಕತ್ವವನ್ನು ರಹಾನೆ ವಹಿಸಿಕೊಂಡಿದ್ದರು. ರಹಾನೆ ಮುಂದಾಳತ್ವದಲ್ಲಿ ತಂಡ ಟೆಸ್ಟ್ ಸರಣಿ ಜಯಿಸಿದ್ದರಿಂದ ಸಹಜವಾಗೇ ಅಭಿಮಾನಿಗಳಿಗೆ ರಹಾನೆ ಮೇಲೆ ಹೆಚ್ಚಿನ ಒಲವಿತ್ತು.

ಎಂದಿನ ನಾಯಕ ವಿರಾಟ್ ಕೊಹ್ಲಿ ಅನುಪಷ್ಥಿತಿಯಲ್ಲಿದ್ದರಿಂದ ನಾಯಕತ್ವವನ್ನು ರಹಾನೆ ವಹಿಸಿಕೊಂಡಿದ್ದರು. ರಹಾನೆ ಮುಂದಾಳತ್ವದಲ್ಲಿ ತಂಡ ಟೆಸ್ಟ್ ಸರಣಿ ಜಯಿಸಿದ್ದರಿಂದ ಸಹಜವಾಗೇ ಅಭಿಮಾನಿಗಳಿಗೆ ರಹಾನೆ ಮೇಲೆ ಹೆಚ್ಚಿನ ಒಲವಿತ್ತು.

ಭಾರತಕ್ಕೆ ವಾಪಸ್ ಆಗಿದ್ದ ರಹಾನೆ ಬಳಗವನ್ನು ಆದರದಿಂದ ಬರ ಮಾಡಿಕೊಳ್ಳಲಾಗಿತ್ತು. ಜೊತೆಗೆ, ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಖುಷಿಗೆ ಕೇಕ್ ಕಟ್ ಮಾಡಿಕೊಳ್ಳುವಂತೆ ಕೇಳಿಕೊಳ್ಳಲಾಯ್ತು. ಆದರೆ ಅಜಿಂಕ್ಯ ರಹಾನೆ ಕೇಕ್ ಕಟ್ ಮಾಡಲು ಒಪ್ಪಲಿಲ್ಲ. ಅದಕ್ಕೊಂದು ಕಾರಣವಿತ್ತು.

ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಕೇಕ್ ಕಟ್ ಮಾಡಲು ರಹಾನೆ ಒಲ್ಲೆಯೆಂದಿದ್ದಕ್ಕೆ ಕಾರಣವಿದೆ. ಸಂಭ್ರಮಾಚರಿಸಲು ತಯಾರಿಸಲಾಗಿದ್ದ ಕೇಕ್‌ನ ಮೇಲೆ ಕಾಂಗರೂ ಚಿತ್ರವಿತ್ತು. ಹೀಗಾಗಿ ಸದಾ ಕ್ರೀಡಾಸ್ಫೂರ್ತಿ ಮೆರೆಯುವ ರಹಾನೆ, ಬೇರೊಂದು ದೇಶದ ರಾಷ್ಟ್ರೀಯ ಪ್ರಾಣಿಯ ಚಿತ್ರವಿರುವ ಕೇಕ್ ಕಟ್ ಮಾಡಲಾರೆ ಎಂದಿದ್ದಾರೆ.

ಕಾಂಗರೂ ಕೇಕ್’ ಕಟ್‌ ಮಾಡಲು ಹಿಂದೆ ಸರಿದ ರಹಾನೆ ನಿಲುವಿನ ಬಗ್ಗೆ ಕ್ರೀಡಾ ಪತ್ರಕರ್ತ, ಕಾಮೆಂಟೇಟರ್ ಹರ್ಷ ಭೋಗ್ಲೆ ಅವರು ರಹಾನೆಯವರಲ್ಲಿ ಸಂವಾದವೊಂದರಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಹಾನೆ, ‘ಕಾಂಗರೂ ಆಸ್ಟ್ರೇಲಿಯಾದವರ ರಾಷ್ಟ್ರೀಯ ಪ್ರಾಣಿ. ಹಾಗಾಗಿ ನಾನು ಕೇಕ್ ಕಟ್ ಮಾಡಲಿಲ್ಲ. ನಿಮ್ಮ ಎದುರಾಳಿಗೂ ನೀವು ಗೌರವ ನೀಡಬೇಕು. ನೀವು ಗೆಲ್ಲಿ ಅಥವಾ ಇತಿಹಾಸ ನಿರ್ಮಿಸಿ; ನೀವು ನಿಮ್ಮ ಎದುರಾಳಿಯನ್ನೂ ಒಳ್ಳೆಯ ರೀತಿಯಲ್ಲಿ ಕಾಣಬೇಕು. ನೀವು ನಿಮ್ಮ ಎದುರಾಳಿ ವ್ಯಕ್ತಿ ಮತ್ತು ಬೇರೆ ದೇಶಗಳನ್ನೂ ಗೌರವದಿಂದ ಕಾಣಬೇಕು. ಹೀಗಾಗಿಯೇ ನಾನು ಕಾಂಗರೂ ಚಿತ್ರವಿದ್ದ ಕೇಕ್ ಕಟ್ ಮಾಡಲು ಒಪ್ಪಲಿಲ್ಲ,’ ಎಂದು ವಿವರಿಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ?

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ? ದೇಹದ ಮೇಲೆ ಹುಟ್ಟುಮಚ್ಚೆಗಳು ಇರುವುದು...

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...