ರಸ್ತೆಗಳಲ್ಲಿ ಕೆಲವೊಬ್ಬರು ಮಾಡುವ ತಪ್ಪಿನಿಂದ ಅಪಘಾತ ಆಗುವುದು ಕಾಮನ್. ರಾಂಗ್ ರೂಟ್ ಮತ್ತು ರಾಂಗ್ ವೇ ನಲ್ಲಿ ವಾಹನ ಚಲಾಯಿಸುವುದು ತದನಂತರ ಅದರಿಂದ ಅಪಘಾತಗಳು ಆಗುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿವೆ. ಇನ್ನು ಕೆಲವೊಂದಿಷ್ಟು ಜನ ರಾಂಗ್ ವೇನಲ್ಲಿ ಬರುವ ವಾಹನ ಚಾಲಕರ ವಿರುದ್ಧ ಸ್ಥಳದಲ್ಲಿಯೇ ಪ್ರತಿಕ್ರಿಯೆ ನೀಡುವುದರ ಮೂಲಕ ಅವರ ತಪ್ಪಿನ ಅರಿವನ್ನು ಮೂಡಿಸುವ ಯತ್ನ ಮಾಡಲು ಮುಂದಾಗುತ್ತಾರೆ ಇದರಿಂದ ಹಲವಾರು ಬಾರಿ ಜಗಳ ಆಗಿರುವುದು ಸಹ ಉಂಟು.
ಇನ್ನು ಕೇರಳದ ತಿರುವನಂತಪುರದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು ರಾಂಗ್ ವೇನಲ್ಲಿ ಸರ್ಕಾರಿ ಬಸ್ಸೊಂದು ಬಂದಿದೆ ಇದೇ ವೇಳೆ ಎದುರುಗಡೆಯಿಂದ ಮಹಿಳೆಯೊಬ್ಬಳು ಸ್ಕೂಟಿಯಲ್ಲಿ ತೆರಳುತ್ತಿದ್ದಳು. ತನ್ನ ಎದುರಿಗೆ ರಾಂಗ್ ವೇನಲ್ಲಿ ಬರುತ್ತಿದ್ದ ಸರಕಾರಿ ಬಸ್ಗೆ ಜಾಗ ಬಿಡದೇ ರಸ್ತೆಯಲ್ಲಿಯೇ ತನ್ನ ಸ್ಕೂಟಿಯನ್ನು ನಿಲ್ಲಿಸಿ ಕೊಳ್ಳುವುದರ ಮೂಲಕ ಸರಿಯಾದ ದಾರಿಯಲ್ಲಿ ಸರ್ಕಾರಿ ಬಸ್ ಹೋಗುವವರೆಗೂ ಇಂಚು ಸಹ ಅಲ್ಲಾಡದೆ ಆ ಮಹಿಳೆ ರಸ್ತೆಯಲ್ಲಿಯೇ ಸ್ಕೂಟಿ ನಿಲ್ಲಿಸಿಕೊಂಡಿದ್ದಳು. ತದ ನಂತರ ಸರ್ಕಾರಿ ಬಸ್ ಚಾಲಕ ಸರಿಯಾದ ದಾರಿಯಲ್ಲಿ ಬಸ್ ನಡೆಸಿದ್ದಾನೆ ಇದನ್ನು ಕಂಡ ಸಾರ್ವಜನಿಕರು ಮಹಿಳೆಯ ದಿಟ್ಟತನಕ್ಕೆ ಶಹಬ್ಬಾಷ್ ಎಂದಿದ್ದಾರೆ.