ಸ್ಯಾಂಡಲ್ವುಡ್ನಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿವೆ. ಈ ಜನರೇಶನ್ ಸ್ಟಾರ್ ಗಳನ್ನು ತೆಗೆದುಕೊಂಡ್ರೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾಥರು ಸಿನಿಮಾದಲ್ಲಿ ನಟಿಸಿದ್ದರು. ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಕುಂದ ಮುರಾರಿ ಸಿನಿಮಾದಲ್ಲಿ ಒಟ್ಟಿಗೇ ನಟಿಸಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತಿತರ ಸ್ಟಾರ್ ನಟರ ಜೊತೆಯಲ್ಲಿ ನಟಿಸಿದ್ದಾರೆ. ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಕೂಡ ದರ್ಶನ್, ಸುದೀಪ್ ಸೇರಿದಂತೆ ಈ ಕಾಲದ ಹಲವಾರು ಸ್ಟಾರ್ ನಟರ ಜೊತೆ ನಟಿಸಿದ್ದರು.
ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ನಿಖಿಲ್, ಅಂಬರೀಶ್ ಮತ್ತಿತರ ಅನೇಕ ನಟರು ನಟಿಸಿದ್ದಾರೆ,
ಈ ಎಲ್ಲದರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರದಲ್ಲಿ ಜೋಡೆತ್ತುಗಳಾಗಿ ಕೆಲಸ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವ ಕುತೂಹಲ ಎಲ್ಲರದ್ದು.
ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸೋಕೆ ದರ್ಶನ್ ರೆಡಿ ಇದ್ದಾರೆ. ಜೋಡೆತ್ತುಗಳು ಅನ್ನೋ ಸಿನಿಮಾ ಆದ್ರೂ ಓಕೆ… ಅಥವಾ ಯಾವ್ದೇ ಒಳ್ಳೆಯ ಕಥೆ, ಡೈರೆಕ್ಟರ್ ಸಿಕ್ಕರೆ ಗಜ, ಗಜಕೇಸರಿ ಜೊತೆ ನಟಿಸಲು ಸೈ ಅಂದಿದ್ದಾರೆ. ಆದಷ್ಟು ಬೇಗ ಅವರಿಬ್ಬರ ಸಿನಿಮಾ ಬರಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.
ರಾಕಿಂಗ್ ಸ್ಟಾರ್ ಯಶ್ ಜೊತೆ ಸಿನಿಮಾ ಮಾಡೋಕರೆ ಸೈ ಎಂದ ಚಾಲೆಂಜಿಂಗ್ ಸ್ಟಾರ್..!
Date: