ರಾಕಿಂಗ್ ಸ್ಟಾರ್ ಯಶ್, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು. ಕಳೆದ ವರ್ಷ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸೂಪರ್ ಹಿಟ್ ಆಗಿದ್ದು ಅಲ್ಲದೆ ವಿಶ್ವದಾದ್ಯಂತ ಸಕತ್ ಸದ್ದು ಮಾಡಿದ ಮೇಲೆ ರಾಕಿಂಗ್ ಸ್ಟಾರ್ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಈಗ ಕೆಜಿಎಫ್ ಚಾಪ್ಟರ್ 2 ಸೆಟ್ಟೇರಿದೆ.
ಯಶ್ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೂಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಅಬ್ಬರದ ಪ್ರಚಾರವನ್ನು ಮಾಡಿದ್ದಾರೆ. ಇದೆಲ್ಲದರ ನಡುವೆ ಯಶ್ ಅವರ ನಿಜವಾದ ಮನಸ್ಥಿತಿ ಮತ್ತೊಮ್ಮೆ ಜಗಜ್ಜಾಹಿರವಾಗಿದೆ.
ಎಲ್ಲರಿಗೂ ಗೊತ್ತೇ ಇರುವಂತೆ ರಾಕಿಂಗ್ ಸ್ಟಾರ್ ಯಶ್ ರವರು ‘ಯಶೋಮಾರ್ಗ’ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ರೈತರ, ಬಡವರ ಏಳಿಗೆಗಾಗಿ ಆ ಸಂಸ್ಥೆ ಮೂಲಕ ಶ್ರಮಿಸುತ್ತಿದ್ದಾರೆ. ಅವರ ಈ ಕೆಲಸ ಮತ್ತೊಮ್ಮೆ ಸದ್ದು ಮಾಡಿದೆ. ಅವರೀಗ ರಾಯಚೂರು ಕಡೆ ಮುಖ ಮಾಡಿದ್ದಾರೆ.
ಯಶ್ ತಮ್ಮ ಯಶೋಮಾರ್ಗದ ಮೂಲಕ ರಾಯಚೂರಿನ ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರನ್ನು ಪೂರೈಸುತ್ತಿದ್ದಾರೆ. ಕಳೆದ ಸಾಲಿನಲ್ಲಿ ಯಶ್ ಇದೇ ಯಶೋಮಾರ್ಗದ ಮೂಲಕ ಕೆರೆಗಳ ಹೂಳೆತ್ತಿದ್ದರು.
ರೈತರ ಪರ, ಬಡವರ ಪರ, ಕಷ್ಟದಲ್ಲಿರುವವರ ಪರ ಸದಾ ಮಿಡಿಯುವ ಯಶ್ ಅವರ ಕಾರ್ಯ ಶ್ಲಾಘನೀಯ. ಯಶ್ ಅವರ ಈ ನಡೆ ಎಲ್ಲರಿಗೂ ಇಷ್ಟವಾಗಿದೆ. ಯಶ್ ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್ ಲೈಫಲ್ಲೂ ಹೀರೋನೇ ಅನ್ನೋದು ಸಾಬೀತಾಗಿದೆ. ಅಲ್ಲವೇ?
ರಾಕಿಂಗ್ ಸ್ಟಾರ್ ಯಶ್ ನಿಜವಾದ ಮನಸ್ಥಿತಿ ಮತ್ತೆ ಬಹಿರಂಗ..! ಯಶ್ ಏನ್ ಮಾಡಿದ್ರು ಅಂದ್ರೆ? ಅಬ್ಬಾ…!
Date: