No menu items!
14.8 C
Munich
Thursday, April 30, 2026

ರಾಹುಲ್‍ಗೆ ಶುರುವಾಗಿದೇ ಮತ್ತೊಂದು ಕಾನೂನು ಕಂಟಕ..!

Must read

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಖೂನ್ ಕಿ ದಲಾಲಿ (ಹತ್ಯೆಯ ದಲ್ಲಾಳಿ)ಎಂದು ನಿಂದಿಸಿದರೆನ್ನಲಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೊಸ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ.

ಈ ಹೇಳಿಕೆ ನೀಡಿರುವ ರಾಹುಲ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಕುರಿತು ಜೂನ್ 7ರಂದು ಆದೇಶ ನೀಡುವುದಾಗಿ ದೆಹಲಿಯ ನ್ಯಾಯಾಲಯವೊಂದು ತೀರ್ಪು ಕಾದಿರಿಸಿದೆ.

ಹಿರಿಯ ವಕೀಲ ಜೋಗಿಂದರ್ ಟುಲಿ ಈ ಸಂಬಂಧ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಹೆಚ್ಚುವರಿ ಮುಖ್ಯ ಮೆಟ್ರೋಆಲಿಟನ್ ದಂಡಾಧಿಕಾರಿ ಸಮರ್ ಶಾಲ್ ಜೂನ್ 7ಕ್ಕೆ ಕಾದಿರಿಸಿದರು. ರಾಹುಲ್ 2016ರಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಮೋದಿ ವಿರುದ್ಧ ಈ ಹೇಳಿಕೆ ನೀಡಿದ್ದರೆನ್ನಲಾಗಿದೆ.

ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಬೇಕೆಂದು ಜೋಗಿಂದರ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.ದೆಹಲಿ ಪೊಲೀಸರು ಮೇ 15ರಂದು ಈ ಸಂಬಂಧ ನ್ಯಾಯಾಲಯಕ್ಕೆ ಕೈಗೊಂಡ ಕ್ರಮದ ವರದಿ ಸಲ್ಲಿಸಿ. ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಈ ಹೇಳಿಕೆ ನೀಡಿರುವುದು ನಿಜವೆಂದು ಹೇಳಿದ್ದರು. ಇದರ ಆಧಾರದ ಮೇಲೆ ಜೋಗಿಂದರ್ ದಾವೆ ಸಲ್ಲಿಸಿ ಎಫ್‍ಐಆರ್‍ಗೆ ಆಗ್ರಹಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article