ಕನ್ನಡದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ -2. ರಾಕಿಂಗ್ ಸ್ಟಾರ್ ಯಶ್ ಮತ್ತು ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಷನ್ನ ಮೂವಿ ಈಗಾಗಲೇ ಸಖತ್ ಸುದ್ದಿಯಲ್ಲಿದೆ. 2018ರಲ್ಲಿ ತೆರೆಕಂಡ ಕೆಜಿಎಫ್ ಸಪ್ತ ಸಾಗರದಾಚೆಗೂ ಸೌಂಡು ಮಾಡಿ, ಕನ್ನಡ ಸಿನಿ ಇಂಡಸ್ಟ್ರಿಯ ಬ್ರ್ಯಾಂಡ್ ವ್ಯಾಲ್ಯುವನ್ನು ಹೆಚ್ಚಿಸಿತ್ತು. ತಮ್ಮ ಮೊದಲ ಸಿನಿಮಾ ಉಗ್ರಂ ಮೂಲಕ ಭರವಸೆ ಮೂಡಿಸಿದ್ದರು. ಉಗ್ರಂ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಬಹು ದೊಡ್ಡ ಬ್ರೇಕ್ ನೀಡಿತ್ತು. ಉಗ್ರಂ ಬಳಿಕ ತಮ್ಮ ಎರಡನೇ ಸಿನಿಮಾ ಕೆಜಿಎಫ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ರು ಪ್ರಶಾಂತ್ ನೀಲ್. ಅಲ್ಲದೆ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಈ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಆದ್ರು. ಕನ್ನಡ ಚಿತ್ರರಂಗದಲ್ಲಿದ್ದ ಯಶ್ ಹವಾ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಿಗೂ ವಿಸ್ತರಿಸಿತು.
ಈಗ ಎಲ್ಲರೂ ಕಾದಿರುವುದು ಕೆಜಿಎಫ್ನ ಭಾಗ 2ಕ್ಕೆ. ಈಗ ಈ ಚಾಪ್ಟರ್ 2 ಶೂಟಿಂಗ್ ಕೊನೇ ಹಂತ ತಲುಪಿದೆ. ಈ ನಡುವೆ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಡೈರೆಕ್ಟರ್ ಪ್ರಶಾಂತ್ ನೀಲ್, ರವೀನಾ ಟಂಡನ್ ಜೊತೆಗಿನ ಫೋಟೋ ಶೇರ್ ಮಾಡಿ, ” ಮೋಸ್ಟ್ ಎನರ್ಜಿಟಿಕ್ ರವೀನಾ ಟಂಡನ್ಗೆ ಕೆಜಿಎಫ್-2ಗೆ ಸ್ವಾಗತ. ಡೆತ್ ವಾರೆಂಟ್ ಜಾರಿ ಮಾಡೋ ಲೇಡಿ ಬಂದಿದ್ದಾಳೆ” ಅಂತ ತಿಳಿಸಿದ್ದಾರೆ.
ಹೀಗೆ ಕೆಜಿಎಫ್ 2ಗೆ ರವೀನಾ ಎಂಟ್ರಿಯಾಗಿದ್ದು, ರಾಕೀಭಾಯ್ಗೆ ಡೆತ್ ವಾರೆಂಟ್ ಜಾರಿಮಾಡಲಿದ್ದಾರೆ ಎಂಬ ಸೀಕ್ರೆಟ್ ರಿವೀಲ್ ಆಗಿದೆ.