ರಾಕ್ ಸ್ಟಾರ್ DSP ರಾಕಿಂಗ್ ಪರ್ಫಾಮೆನ್ಸ್ ಗೆ ಸಿಲಿಕಾನ್ ಸಿಟಿ‌ಮಂದಿ ಫುಲ್ ಖುಷ್…

Date:

*ರಾಕ್ ಸ್ಟಾರ್ DSP ರಾಕಿಂಗ್ ಪರ್ಫಾಮೆನ್ಸ್ ಗೆ ಸಿಲಿಕಾನ್ ಸಿಟಿ‌ಮಂದಿ ಫುಲ್ ಖುಷ್…ದೇವಿಶ್ರೀ ಪ್ರಸಾದ್ ಲೈಫ್ ಕಾನ್ಸರ್ಟ್ ಗೆ ಸ್ಯಾಂಡಲ್ ವುಡ್ ಸಾಥ್*

*ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜರುಗಿದ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಹಬ್ಬ…ಶಿವಣ್ಣ, ಕಿಚ್ಚ ಸೇರಿ ಹಲವರು ಭಾಗಿ*

ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್..ತೆಲುಗು ಚಿತ್ರರಂಗದ ಟ್ರೆಂಡಿಂಗ್ ಮ್ಯೂಸಿಕ್‌ ಡೈರೆಕ್ಟರ್. ಆರ್ಯ’, ‘ಬನ್ನಿ, ‘ಆರ್ಯ 2’, ‘ಜುಲಾಯಿ’, ‘ಇದ್ದಿರಮ್ಮಾಯಿಲತೋ’, ‘ಸನ್‌ ಆಫ್ ಸತ್ಯಮೂರ್ತಿ’, ರಂಗಸ್ಥಳಂ, ಇತ್ತೀಚಿಗೆ ಬಂದ ಪುಷ್ಪ ಸರಣಿ ಚಿತ್ರಗಳಿಗೆ ಸಂಗೀತ ಒದಗಿಸಿರುವ DSP, ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೈವ್ ಕಾನ್ಸರ್ಟ್ ನಡೆಸಿದರು. ನಗರದ ಮಾದವರ ಬಳಿಕ ನೈಸ್ ಗ್ರೌಂಡ್ ನಲ್ಲಿ ನಡೆದ ಅದ್ಧೂರಿ ಸಂಗೀತ ಸಂಜೆಯಲ್ಲಿ ಸಿಲಿಕಾನ್ ಮಂದಿ ಭಾಗಿಯಾಗಿ, ಡಿಎಸ್ ಪಿ ರಾಕಿಂಗ್ ಮ್ಯೂಸಿಕ್ ಗೆ ತಲೆದೂಗಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ, ಖ್ಯಾತ ಡ್ಯಾನ್ಸ್ ಕೊರಿಯೋಗ್ರಫ್ ಗಣೇಶ್ ಆಚಾರ್ಯ ಚಿಂದಿ ಡ್ಯಾನ್ಸಿಂಗ್ ಸ್ಟೆಪ್ಸ್ ಗೆ ಜನ ಹುಚ್ಚೆದ್ದು ಕುಣಿದ್ದರು.


ಬಹಳ ಅಚ್ಚುಕಟ್ಟಾಗಿ ನಡೆದ ಲೈವ್ ಕಾನ್ಸರ್ಟ್ ನಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದು, ವಿಶೇಷವಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್ ದಂಪತಿ, ರೋರಿಂಗ್ ಸ್ಟಾರ್ ಶ್ರೀಮುರಳಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ನಿರ್ದೇಶಕರಾದ ತರುಣ್ ಸುಧೀರ್, ಪವನ್ ಒಡೆಯರ್, ಸಂಗೀತ ನಿರ್ದೇಶಕರಾದ ಹರಿಕೃಷ್ಣ, ಗುರುಕಿರಣ್, ಜೂಡಾ ಸ್ಯಾಂಡಿ, ಪೂರ್ಣ ಚಂದ್ರ ತೇಜಸ್ವಿ, ನಟಿ ಮಾನ್ವಿತಾ ಕಾಮತ್,

ಆಲ್ ಒಕೆ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವೆಂಕಟ್ ಕೊನಂಕಿ, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಸೇರಿದಂತೆ ಹಲವರು ಭಾಗಿಯಾಗಿ, ದೇವಿ ಶ್ರೀ ಪ್ರಸಾದ್ ಸಂಗೀತಕ್ಕೆ ಚಪ್ಪಾಳೆ ತಟ್ಟಿದರು.

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...