ರಾಜು ತಾಳಿಕೋಟಿ ಇನ್ನಿಲ್ಲ

Date:

ಖ್ಯಾತ ರಂಗ ಕಲಾವಿದ, ನಟ, ರಂಗನಿರ್ದೇಶಕ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜು ತಾಳಿಕೋಟಿ ಗ್ರಾಮೀಣ ಸೊಗಡಿನ ಪ್ರತಿಭೆ ಅಂದರೆ ತಪ್ಪಾಗಲಾರದು. ಕಲಿಯುಗದ ಕುಡುಕ ಸೇರಿದಂತೆ ಸಾಕಷ್ಟು ನಾಟಕಗಳು ಹಾಗೂ ಅವರ ನಟನೆಯಿಂದಲೆ ಖ್ಯಾತಿ ಗಳಿಸಿದ್ದರು.

ಶೂಟಿಂಗ್ ನ ವೇಳೆ ಹುಸಿದು ಬಿದ್ದಿದ್ದಾರೆ. ಅವರನ್ನ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೇ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ಅವರು, ರಂಗಭೂಮಿ ಹಾಗೂ ಸಿನಿಮಾ ಲೋಕದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.

ಮಾಹಿತಿಯ ಪ್ರಕಾರ, ಶನಿವಾರ ಮಧ್ಯರಾತ್ರಿ (ಅಕ್ಟೋಬರ್ 12) ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾದರು.

ರಾಜು ತಾಳಿಕೋಟೆ ಅವರು ಮುಂದಿನ ಮೂರು ದಿನಗಳ ಕಾಲ ನಡೆಯಲಿದ್ದ ಚಲನಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲು ತಯಾರಾಗಿದ್ದರು. ಅವರ ಅಕಾಲಿಕ ನಿಧನ ಚಿತ್ರತಂಡಕ್ಕೆ ಹಾಗೂ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.

ಹಾಸ್ಯ ನಟನಾಗಿ ಮತ್ತು ರಂಗಕರ್ಮಿಯಾಗಿ ಗುರುತಿಸಿಕೊಂಡಿದ್ದ ರಾಜು ತಾಳಿಕೋಟೆ ಅವರು ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೇ’, ‘ರಾಜಧಾನಿ’, ‘ಅಲೆಮಾರಿ’, ‘ಮೈನಾ’, ‘ಟೋಪಿವಾಲಾ’ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು.

Share post:

Subscribe

spot_imgspot_img

Popular

More like this
Related

RSS ಬ್ಯಾನ್ ಕೇಳಿರೋದು ನಿಮ್ಮ ಕಲ್ಪನೆ, ನಿಜವಲ್ಲ – ಖರ್ಗೆ ಸ್ಪಷ್ಟನೆ”

RSS ಬ್ಯಾನ್ ಕೇಳಿರೋದು ನಿಮ್ಮ ಕಲ್ಪನೆ, ನಿಜವಲ್ಲ – ಖರ್ಗೆ ಸ್ಪಷ್ಟನೆ" ಬೆಂಗಳೂರು:-...

ಚಿಕ್ಕಬಳ್ಳಾಪುರ: ಯುವತಿಯ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಬಂಧನ

ಚಿಕ್ಕಬಳ್ಳಾಪುರ: ಯುವತಿಯ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಬಂಧನ ಚಿಕ್ಕಬಳ್ಳಾಪುರ: ಉದ್ಯೋಗಕ್ಕಾಗಿ...

Gold Price Today: ಚಿನ್ನ, ಬೆಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಹೀಗಿದೆ ಇಂದಿನ ರೇಟ್!

Gold Price Today: ಚಿನ್ನ, ಬೆಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಹೀಗಿದೆ...

ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಣೆ! ಗುಡುಗು ಸಹಿತ ಮಳೆ

ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಣೆ! ಗುಡುಗು ಸಹಿತ...