ಜೂನ್ 21ರಿಂದ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಉಚಿತ ಲಸಿಕೆ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂದಿನ ಎರಡು ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ.
ಶೇ.25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆ ಖರೀಸಬಹುದು, ಹಣವಿದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಲಿದೆ ಎಂದರು.
ಭಾರತದಲ್ಲಿ 2014ಕ್ಕೂ ಮುನ್ನ ಶೇ.60ರಷ್ಟು ಲಸಿಕೆ ಉತ್ಪಾದನಾ ಪ್ರಮಾಣವಿತ್ತು, ಆದರೆ 6ವರ್ಷಗಳಲ್ಲಿ ಅದನ್ನು ಶೇ.80-90ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೇಶದಲ್ಲಿ ಹಲವು ಮಂದಿ ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದಾರೆ, ಸ್ನೇಹಿತರನ್ನು ಕಳೆದುಕೊಂಡಿದ್ದಾರೆ, ಪರಿಚಯಸ್ಥರನ್ನು ಕಳೆದುಕೊಂಡಿದ್ದಾರೆ.ಕಳೆದ 100 ವರ್ಷಗಳಲ್ಲಿ ಕಾಣದ ಎಲ್ಲಕ್ಕಿಂತ ದೊಡ್ಡ ಮಹಾಮಾರಿ ಕೊರೊನಾವಾಗಿದೆ, ಈ ರೀತಿಯ ಮಹಾಮಾರಿಯನ್ನು ಆಧುನಿಕ ವಿಶ್ವ ನೋಡಿಲ್ಲ ಅದರ ಅನುಭವ ಯಾರಿಗೂ ಇರಲಿಲ್ಲ ಎಂದರು.