ಬೆಂಗಳೂರು” ಮಳೆ ಇಲ್ಲ.. ನೀರು ಇಲ್ಲ.. ಬೆಳೆ ಇಲ್ಲ.. ಎಂದು ಕೇವಲ 1 ತಿಂಗಳ ಹಿಂದಷ್ಟೇ ಹಿಂಗೆ ಗೊಣಗುತ್ತಿದ್ದರು. ಆದರೆ ಈಗ ಭರ್ಜರಿ ಮಳೆ ಬೀಳುತ್ತಿದೆ, ಕಳೆದ 1 ವಾರದಿಂದ ನಿರಂತರ , ಭರ್ಜರಿ ಮಳೆ ಬರುತ್ತಿದೆ.. ಇನ್ನೂ ಇಂದು ಸಹ ವರುಣನ ಆರ್ಭಟ ಮುಂದುವರೆಯಲಿದೆ.
ರಾಜ್ಯದಲ್ಲ ಮುಂಗಾರು ಬಹುತೇಕ ಜಿಲ್ಲೆಗಳಲ್ಲಿ ಚುರುಕಾಗಿದ್ದು, ಇಂದು ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚಿನ ಸಮೇತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು,
ಇಂದು ಸಿಲಿಕಾನ್ ಸಿಟಿಯಲ್ಲಿ ಮೋಡಕವಿದ ಹಾಗೂ ಸಾಧಾರಣ ಮಳೆ ಆಗುವ ಸಾಧ್ಯತೆಯಿದ್ದು, ಬೆಳಗಾವಿ. ಧಾರವಾಡ. ಹಾವೇರಿ. ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್ 11 ವರೆಗೂ ಕರಾವಳಿ ಹಾಗೂ ದಕ್ಷಿಣ ಒಳ ನಾಡಿನಲ್ಲಿ ಭಾರೀ ಮಳೆ ಸಾಧ್ಯತೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಇಂದು ಅಬ್ಬರಿಸಲಿದ್ದಾನೆ ವರುಣ: ಹವಾಮಾನ ಇಲಾಖೆ
Date: