ರಾಜ್ಯದಲ್ಲಿ ಕುಮಾರಸ್ವಾಮಿ ಅವರಂಥ ನಾಯಕರ ಕೊರತೆ ಕಾಣ್ತಿದೆ: ನಿಖಿಲ್ ಕುಮಾರಸ್ವಾಮಿ
ಕೋಲಾರ: ರಾಜ್ಯದಲ್ಲಿ ಕುಮಾರಸ್ವಾಮಿ ಅವರಂಥ ನಾಯಕರ ಕೊರತೆ ಕಾಣ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಕೇಂದ್ರದಲ್ಲಿ ಸಚಿವರಾಗಿರುವ ಕಾರಣ ರಾಜ್ಯದಲ್ಲಿ ಜೆಡಿಎಸ್ ಮಂಕಾಗಿಲ್ಲ.
ರಾಜ್ಯದ ವಿಚಾರಗಳ ಬಗ್ಗೆ ಕುಮಾರಣ್ಣ ಸ್ಪಂದಿಸುತ್ತಾ, ಪ್ರತಿ ವಿಚಾರದ ಬಗ್ಗೆಯೂ ಚರ್ಚೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಕುಮಾರಸ್ವಾಮಿ ಅವರಂಥ ನಾಯಕರ ಕೊರತೆ ಕಾಣ್ತಿದೆ ಎಂದು ಹೇಳಿದರು.
ಇನ್ನೂ ಗೂಗಲ್ ಹಬ್ ಬೆಂಗಳೂರಿನಿಂದ ಆಂಧ್ರಕ್ಕೆ ಹೋಗಿದೆ. ಇದರಿಂದ ರಾಜ್ಯಕ್ಕೆ ನಷ್ಟವಾಗಿದೆ. ಬೆಂಗಳೂರಿಗೆ ಐಟಿ ಸೆಕ್ಟರ್ ಗಳನ್ನು ತಂದವರು ದೇವೇಗೌಡರು. ಇದರ ಬಗ್ಗೆ ಚರ್ಚೆ ಮಾಡದೆ RSS ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು ಕಿಡಿಕಾರಿದರು.
ದೇಶ ಕಟ್ಟುವ ಕೆಲಸ RSS ಮಾಡಿಕೊಂಡು ಬಂದಿದೆ. ನೂರು ವರ್ಷ ಪೂರೈಸಿರುವ ಸಂಘವಾಗಿದೆ. RSS ನಿಂದ ದೇಶಕ್ಕೆ ಸಮಸ್ಯೆ ಉಂಟಾಗಿಲ್ಲ. ಶಿಸ್ತು ಬದ್ದವಾಗಿ ಸಮಾಜ ಕಟ್ಟುವ ಕೆಲಸ ಮತ್ತು ಚಿಂತನೆ ಮಾಡಿದೆ. ಕಾಂಗ್ರೆಸ್ ನ ಕೆಲ ವ್ಯಕ್ತಿಗಳು ವಿಚಾರವನ್ನು ಡೈರ್ಷನ್ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದವರು.