ರಾಜ್ಯದಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ ಬ್ಯಾನ್!?

Date:

ಬೆಂಗಳೂರು:- ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳ ಬಳಿಕ ಈಗ ರಾಜ್ಯ ಸರ್ಕಾರವೂ ಅಸುರಕ್ಷಿತ ಕಾಟನ್‌ ಕ್ಯಾಂಡಿ, ಗೋಬಿಗೆ ನಿಯಂತ್ರಣ ಹೇರಲು ಮುಂದಾಗಿದೆ.

ಈ ಬಗ್ಗೆ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಸುದ್ದಿಗೋಷ್ಠಿಗೂ ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದೆ. ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಆ ಹಿನ್ನೆಲೆಯಲ್ಲಿ, ಇಂದು ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬೆರಕೆ ಹಿನ್ನೆಲೆ ಈ ಹಿಂದೆ ವಿವಿಧ ಸ್ಯಾಂಪಲ್ ಗಳ ಪರೀಕ್ಷೆಗೆ ನೀಡಲಾಗಿತ್ತು. ಸದ್ಯ ಪರೀಕ್ಷೆಯ ವರದಿ ಬಂದ ಹಿನ್ನೆಲೆ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ಧಿಗೋಷ್ಠಿ ನಡೆಸಲು ಮುಂದಾಗಿದ್ದು ರಾಜ್ಯದಲ್ಲಿ ಅಸುರಕ್ಷಿತ ಗೋಬಿ ಹಾಗೂ ಕ್ಯಾಂಡಿ ಕೂಡ ಬ್ಯಾನ್ ಆಗುವ ಸಾಧ್ಯತೆ ಇದೆ.

ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 100ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿಗಳು ಅಸುರಕ್ಷಿತ ಎಂದು ವರದಿಯಲ್ಲಿಉಲ್ಲೇಖಿಸಿದ್ದಾಗಿ ತಿಳಿದು ಬಂದಿದೆ. ಇನ್ನು ತಜ್ಞರು ಕೂಡಾ ಈ ಆಹಾರ ಸೇವನೆ ಅಪಾಯಕಾರಿ ಎಂದಿದ್ದಾರೆ.

ಇನ್ನು ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್‌-ಬಿ ಹಾಗೂ ಗೋಬಿ ಮಂಚೂರಿಯಲ್ಲಿ ಸನ್‌ಸೆಟ್‌ ಯೆಲ್ಲೊ ಬಣ್ಣ ಮತ್ತು ಟಾಟ್ರ್ರಾಜಿನ್‌ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಎರಡೂ ತಿನಿಸುಗಳನ್ನು ನಿಷೇಧಿಸಲು ಮುಂದಾಗಿದೆ. ಆಹಾರ ಮತ್ತು ಸುರಕ್ಷತಾ ಇಲಾಖೆ ವರದಿ ಆಧರಿಸಿ ಆರೋಗ್ಯ ಸಚಿವರು ಇಂದು ರಾಜ್ಯದಲ್ಲಿ ಇವುಗಳ ನಿಷೇಧ ಪ್ರಕಟಿಸುವ ಸಂಭವವಿದೆ. ಆದ್ರೆ ಇದಕ್ಕೆ ಗೋಬಿ ಮಾರಟಗಾರರು ಬೇಸರ ಹೊರ ಹಾಕಿದ್ದಾರೆ. ಇದನ್ನೇ ನಂಬಿ ಬದುಕು ಸಾಗಿಸುವವರ ಜೀವನ ಹೇಗೆ ಸರ್ಕಾರ ಅಪಾಯಕಾರಿಯಾದ ಅಂಶ ಬಳಕೆಗೆ ನಿಷೇಧ ಹಾಕಲಿ. ಆದ್ರೆ ಕಂಪ್ಲೀಟ್ ಬ್ಯಾನ್ ಮಾಡುವುದು ಬೇಡಾ ಎಂದು ಕೆಲ ಗೋಬಿ ಮಾರಾಟಗಾರರು ಮನವಿ ಮಾಡಿದ್ದಾರೆ.

ಒಟ್ನಲ್ಲಿ ಜನರ ಆರೋಗ್ಯದ ದೃಷ್ಠಿಯಿಂದ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು ರಾಜ್ಯದಲ್ಲಿ ಗೋಬಿ ಹಾಗೂ ಕಾಟನ್ ಕ್ಯಾಂಡಿ ಬ್ಯಾನ್ ಆಗುವ ಸಾಧ್ಯತೆ ಇದೆ. ಈ ಕುರಿತಂತೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

Share post:

Subscribe

spot_imgspot_img

Popular

More like this
Related

ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ

ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ ಮಂಡ್ಯ:...

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ಇಲ್ಲಿದೆ ಉತ್ತರ

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ಇಲ್ಲಿದೆ ಉತ್ತರ ಚಳಿಗಾಲದಲ್ಲಿ ಅನೇಕರು...

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ...

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ ಬೆಂಗಳೂರು:...