ಬೆಂಗಳೂರು: ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರ ನಡೆಗೆ ಸಾ ರಾ ಗೋವಿಂದ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ .. ಫೆ.28ರೊಳಗೆ ರಾಜಧಾನಿ ಬೆಂಗಳೂರಲ್ಲಿ ಅಂಗಡಿ ಮುಂಗಟ್ಟುಗಳ ನಾಮಫಲಕ ಕನ್ನಡಮಯ ಆಗದಿದ್ದರೆ ಪುನಃ ಬೀದಿಗಿಳಿದು ಹೋರಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಾಮಫಲಕದಲ್ಲಿ ಶೇ.60 ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕದಿರುವುದರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡುತ್ತಿವೆಯೋ ಗೊತ್ತಿಲ್ಲ.
ಕನ್ನಡ ನೆಲದಲ್ಲಿ ಇರಬೇಕು ಎಂದರೆ ಸುಗ್ರೀವಾಜ್ಞೆ ಪ್ರತಿಗೆ ಮಾಡಬೇಕಿತ್ತು ಎಂದು ಹೇಳಿದರು.ಸರ್ಕಾರ, ಪೊಲೀಸರು ನಮ್ಮ ಹೋರಾಟದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಗಡುವು ನೀಡಿದಂತೆ ಫೆ.28ರೊಳಗೆ ರಾಜಧಾನಿ ಬೆಂಗಳೂರಲ್ಲಿ ನಾಮಫಲಕಗಳು ಕನ್ನಡಮಯ ಆಗದಿದ್ದರೆ ಪುನಃ ಬೀದಿಗಿಳಿದು ಹೋರಾಟ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.ಫೆ.28 ನಾಮಫಲಕ ಅಳವಡಿಕೆಗೆ ಕೊನೆಯ ದಿನ. ಕಾನೂನು ಬೆದರಿಕೆಯ ಮೂಲಕ ನಮ್ಮ ಹೋರಾಟದ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. . ಗಡುವಿನ ಬಳಿಕ ಕರವೇ ಪುನಃ ಹೋರಾಟವನ್ನು ಮುಂದುವರಿಸಲಿದೆ ಎಂದರು.
ರಾಜ್ಯಪಾಲರ ನಡೆಗೆ ಸಾ ರಾ ಗೋವಿಂದ್ ತೀವ್ರ ಆಕ್ರೋಶ.! ಯಾಕೆ ಗೊತ್ತಾ..?
Date: