ಶಿವಮೊಗ್ಗ , ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಸೀತಾನದಿ ಉಕ್ಕಿ ಹರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.
ಇದರಿಂದಾಗಿ ಆಗುಂಬೆ ಮೂಲಕ ಉಡುಪಿಗೆ ತೆರಳುವ ವಾಹನಗಳನ್ನು ಹೆಬ್ರಿ ಮಾಂಡಿ ಮೂರ್ಕೈ ಕುಚ್ಚೂರು ಮಾರ್ಗವಾಗಿ ಸೋಮೇಶ್ವರದ ಮೂಲಕ ಕಳುಹಿಸಿಕೊಡಲಾಗುತ್ತಿದೆ. ಆದೇ ರೀತಿ ಶಿವಮೊಗ್ಗಕ್ಕೆ ತೆರಳುವ ವಾಹನಗಳೂ ಇದೇ ಮಾರ್ಗದಲ್ಲಿ ತೆರಳುವಂತೆ ಸೂಚಿಸಲಾಗಿದೆ.
ಆಗುಂಬೆ, ತೀರ್ಥಹಳ್ಳಿಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ವಾಹನ ಸಂಚಾರ ನಿಧಾನ ಗತಿಯಲ್ಲಿ ಸಾಗಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಮಳೆ ಇದೇ ರೀತಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.