ರಾಜ್ಯ ಸರ್ಕಾರದಿಂದ ತೃತೀಯ ಲಿಂಗಿಗಳಿಗೆ ಗುಡ್‌ ನ್ಯೂಸ್‌.!

Date:

ಬೆಂಗಳೂರು: ರಾಜ್ಯ ಸರ್ಕಾರದಿಂದ ತೃತೀಯ ಲಿಂಗಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಹೌದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮುಂದಿನ ತಿಂಗಳಿನಿಂದ ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಹಣ ನೀಡಲು ಆದೇಶ ಆಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ತಿಂಗಳ ಕೊನೆಯ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಜಿಲ್ಲಾಧಿಕಾರಿಗಳಿಂದ ವಿತರಿಲ್ಪಟ್ಟ ಗುರುತಿನ ಚೀಟಿ ಇದ್ದರೆ ತೃತೀಯ ಲಿಂಗಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ತಿಂಗಳ ಒಳಗಡೆ ಅರ್ಜಿ ಸಲ್ಲಿಕೆಯಾದ್ರೆ ಮುಂದಿನ ತಿಂಗಳೇ ತೃತೀಯ ಲಿಂಗಿಗಳ ಅಕೌಂಟ್ಗೆ ಎರಡು ಸಾವಿರ ರೂಪಾಯಿ ಹಣ ಬರಲಿದೆ.
ರಾಜ್ಯದಲ್ಲಿ 40,000 ಹೆಚ್ಚು ತೃತೀಯ ಲಿಂಗಿಗಳಿದ್ದು ಅವರ ಅಭಿವೃದ್ಧಿಗೆ ಅಥವಾ ಜೀವನೋಪಾಯಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಗಲಿದೆ. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೈಬರ್ ಸೆಂಟರ್ಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈಗಾಗಲೇ 1.24 ಕೋಟಿ ಮಂದಿ ಗೃಹಲಕ್ಷ್ಮಿ ಯೋಜನೆಗೆ ನೊಂದಾಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 1.25 ಕೋಟಿ ಮಂದಿ 2 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದು 1.5 ಲಕ್ಷ ಮಂದಿ ಜಿಎಸ್ಟಿ ಮತ್ತು ಆದಾಯ ತೆರಿಗೆ ಪಾವತಿ ದಾರರಾಗಿದ್ದು ಅವರಿಗೆ ಹಣ ಸಂದಾಯ ಸ್ಥಗಿತ ಮಾಡಲಾಗಿದೆ. ಜೊತೆಗೆ ಮೇ ತಿಂಗಳವರೆಗೂ ಹಣ ಸಂದಾಯ ಆಗಿದ್ದು‌ ಜೂನ್ ತಿಂಗಳ ಹಣ ವರ್ವಗಾವಣೆಯಾಗಬೇಕಿದೆ.
ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಹಣ ನೀಡುವ ಬಗ್ಗೆ ತೃತೀಯ ಲಿಂಗಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನ ಮಂಗಳಮುಖಿಯರು ಕಷ್ಟದಲ್ಲಿದ್ದಾರೆ. ಅಂತಹವರಿಗೆ ಈ ಹಣ ಸಾಕಷ್ಟು ಅನುಕೂಲವಾಗಲಿದೆ. ಐದು ಸ್ಕೀಮ್ ಪೈಕಿ ಶಕ್ತಿ ಯೋಜನೆ ನಮ್ಮ ಕೈ ಸೇರಿತ್ತು. ಆದ್ರೆ ಗೃಹಲಕ್ಷ್ಮಿ ಹಣ ಸಿಕ್ಕಿರಲಿಲ್ಲ. ಇದೀಗ ಎಲ್ಲ ಮಹಿಳೆಯರಂತೆ ನಮಗೂ ಈ ಹಣ ಸಿಗಲಿದೆ ಎಂದು ಸರ್ಕಾರಕ್ಕೆ ದನ್ಯವಾದ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ ರೆಡ್ ವೈನ್‌...

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...