ಇಂದು ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ಕುಮಾರ್ ಅವರ ಜನ್ಮದಿನ ಇಂದು. ರಾಜ್ ಜನ್ಮದಿನ ಈ ಗಳಿಗೆಯಲ್ಲಿ ಕನ್ನಡ ಚಿತ್ರರಂಗದ 3 ಕಣ್ಣುಗಳಂತಿದ್ದ ಕಣ್ಮಣಿಗಳಾದ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಡಾ.ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಗ್ಗೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್ಕುಮಾರ್ ಅವರು ಮಾತನಾಡಿದ್ದಾರೆ.
ಅಪ್ಪಾಜಿ (ಡಾ.ರಾಜ್), ವಿಷ್ಣುವರ್ಧನ್ ಅವ್ರು, ಅಂಬರೀಶ್ ಅವ್ರಲ್ಲಿ ಯಾರೂ ಹೆಚ್ಚು ಅಲ್ಲ, ಕಮ್ಮಿ ಅಲ್ಲ. ಈ ಮೂವರು ಲೆಜೆಂಡ್ಗಳೇ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಮೂವರ ಸ್ಮಾರಕವೂ ಆಗಬೇಕು. ಯಾರ ಸ್ಮಾರಕ ಮೊದಲು ಆಗಬೇಕು ಎಂದಲ್ಲ. ಎಲ್ಲರ ಸ್ಮಾರಕವೂ ಆಗಬೇಕು. ಮೂವರ ಸ್ಮಾರಕವೂ ಒಂದೇ ಕಡೆ ಆದರೆ ಅದರಷ್ಟು ಸಂತೋಷದ ವಿಷಯ ಬೇರೊಂದಿಲ್ಲ ಎಂದು ಹೇಳಿದರು.
ಶಿವರಾಜ್ ಕುಮಾರ್ ಅವರು ಮಾತ್ರವಲ್ಲದೆ ನಟಿ, ಮಂಡ್ಯದ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕೂಡ ಮಾತಾಡಿದ್ದಾರೆ. ನಮಗೆ ಅಂಬರೀಶ್ ಅವರ ಸ್ಮಾರಕ ನಿಧಾನ ಆದರೂ ಪರವಾಗಿಲ್ಲ. ರಾಜ್ಕುಮಾರ್ ಅವರ ಮತ್ತು ವಿಷ್ಣವರ್ಧನ್ ಅವರ ಸ್ಮಾರಕ ಮೊದಲು ಆಗಲಿ ಎಂದಿದ್ದಾರೆ.
ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 5ನೇ ತಿಂಗಳ ಮಾಸಿಕ ಪೂಜೆ ಇತ್ತು. ಅದಕ್ಕಾಗಿ ಸುಮಲತಾ ಅಂಬರೀಶ್ ಅವರು ಕಂಠೀರವ ಸ್ಟೂಡಿಯೋಕ್ಕೆ ಅಂಬಿ ಸ್ಮಾರಕದ ಬಳಿ ಬಂದಿದ್ದರು. ಇದೇ ಸಂದರ್ಭದಲ್ಲಿ ಡಾ.ರಾಜ್ಕುಮಾರ್ ಅವರ ಸ್ಮಾರಕದ ಬಳಿ ಹೋಗಿ ಪೂಜೆ ಸಲ್ಲಿಸಿದರು. ಸುಮಲತಾ ಅವರ ಜೊತೆ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಬಂದಿದ್ದರು.
ರಾಜ್, ವಿಷ್ಣು, ಅಂಬಿ ಬಗ್ಗೆ ಶಿವಣ್ಣ ಅದೆಂಥಾ ಮಾತು ಆಡಿದ್ದಾರೆ ಗೊತ್ತಾ?
Date: