ರಾತ್ರೋರಾತ್ರಿ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪನೆ: ಸ್ಥಳದಲ್ಲಿ ಬಿಗುವಿನ ವಾತವರಣ

Date:

ರಾತ್ರೋರಾತ್ರಿ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪನೆ: ಸ್ಥಳದಲ್ಲಿ ಬಿಗುವಿನ ವಾತವರಣ!

 

ಧಾರವಾಡ: ರಾತ್ರೋರಾತ್ರಿ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತವರಣ ಉಂಟಾಗಿರುವ ಘಟನೆ ಧಾರವಾಡದಲ್ಲಿ ಜರುಗಿದೆ.

 

ನಿನ್ನೆ ಹೊಸ ವರ್ಷಾಚರಣೆ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಧಾರವಾಡದಲ್ಲಿ ವಿಚಿತ್ರವೊಂದು ನಡೆದು ಹೋಗಿದೆ.

 

ಹೀಗೆ ಖುಲ್ಲಾ ಜಾಗದಲ್ಲಿ ವಿರಾಜಮಾನರಾಗಿರುವ ಅಯ್ಯಪ್ಪನ ಮೂರ್ತಿ. ಅದರ ಎದುರುಗಡೆಯೇ ನಾಗರ ಮೂರ್ತಿ. ಎರಡೂ ಮೂರ್ತಿಗಳಿಗೆ ಪೂಜೆ ಪುನಸ್ಕಾರ. ಮತ್ತೊಂದೆಡೆ ಅಯ್ಯಪ್ಪ ಮಾಲಾಧಾರಿಗಳ ಸಮಾಗಮ. ಈ ಎಲ್ಲ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಜಮೀನು.

 

ಹೌದು! ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಬೆಳಗಾವಿ ರಸ್ತೆಯಲ್ಲಿರುವ ಜಮೀನಿನಲ್ಲಿ ರಾತ್ರೋರಾತ್ರಿ ಯಾರೋ ಶಬರಿಮಲೈ ಗಿರಿವಾಸ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅದರ ಎದುರುಗಡೆಯೇ ನಾಗರ ಮೂರ್ತಿ ಕೂಡ ಪ್ರತಿಷ್ಠಾಪಿಸಿದ್ದಾರೆ. ಶಾಸ್ತ್ರೋಕ್ತವಾಗಿ ಉತ್ತರಾಭಿಮುಖವಾಗಿ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದರೆ, ಅದರ ಎದುರುಗಡೆಯೇ ನಾಗರಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದಾರೆ. ಅಲ್ಲದೇ ಎರಡೂ ಮೂರ್ತಿಗಳಿಗೆ ಪೂಜೆ, ಪುನಸ್ಕಾರ ಕೂಡ ಮಾಡಲಾಗಿದೆ. ಕಟ್ಟೆ ಕಟ್ಟಿ ಅದರ ಮೇಲೆ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಿ ಮೂರ್ತಿಗೆ ಕಪ್ಪು ವಸ್ತ್ರ ಕೂಡ ಹಾಕಲಾಗಿದೆ. ಈ ರೀತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಎರಡ್ಮೂರು ದಿನವಾದರೂ ಇದು ಬೆಳಕಿಗೆ ಬಂದಿದ್ದು ಬುಧವಾರ ಬೆಳಿಗ್ಗೆ. ಈ ರೀತಿ ಮೂರ್ತಿ ಪ್ರತಿಷ್ಠಾಪನೆ ವಿಷಯ ಬೆಳಕಿಗೆ ಬಂದಿದ್ದೇ ತಡ ಅಲ್ಲಿ ಅಯ್ಯಪ್ಪನ ಮಾಲಾಧಾರಿಗಳು ಜಮಾಯಿಸಿ ಅಯ್ಯಪ್ಪನ ಮೂರ್ತಿಗೆ ಕೈಮುಗಿದಿದ್ದಾರೆ.

 

ಇನ್ನು ಈ ಜಾಗದಲ್ಲಿ ಯಾರು ಯಾವ ಉದ್ದೇಶಕ್ಕೋಸ್ಕರ ಮೂರ್ತಿ ಪ್ರತಿಷ್ಠಾಪಿಸಿದ್ದಾರೋ ಗೊತ್ತಿಲ್ಲ. ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಿದ್ದು ಒಳ್ಳೆಯದಾಯಿತು. ಇಲ್ಲಿ ಅಯ್ಯಪ್ಪನ ದೇವಸ್ಥಾನ ಆದರೆ ಚೆನ್ನಾಗಿಯೇ ಇರುತ್ತದೆ. ಇದನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸುವುದು ಬೇಡ ಎಂಬ ಅಭಿಪ್ರಾಯವನ್ನು ಕೆಲ ಸ್ಥಳೀಯರು ಕೂಡ ವ್ಯಕ್ತಪಡಿಸಿದ್ದಾರೆ.

 

ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಜಮೀನಿನಲ್ಲಿ ಈ ರೀತಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಕುಲಪತಿಗಳ ಗಮನಕ್ಕೆ ಹಾಗೂ ಪೊಲೀಸರ ಗಮನಕ್ಕೂ ಇದೆ. ಆದರೆ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಕೃಷಿ ವಿಶ್ವವಿದ್ಯಾಲಯ. ಕೃಷಿ ವಿಶ್ವವಿದ್ಯಾಲಯ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಪೊಲೀಸರು ಭದ್ರತೆ ಒದಗಿಸುತ್ತಾರೆ. ಈ ಬಗ್ಗೆ ಸಭೆ ನಡೆಸಿದ ಕುಲಪತಿಗಳು, ಆ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದನ್ನು ತೆರವುಗೊಳಿಸುವ ನಿರ್ಧಾರ ತೆಗೆದುಕೊಂಡರು. ಅಲ್ಲದೇ ಸ್ಥಳಕ್ಕೆ ಜೆಸಿಬಿ ಸಹ ಕಳುಹಿಸಿ ಆ ಮೂರ್ತಿಗಳನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾದರು. ಆದರೆ, ಅಲ್ಲಿ ಸೇರಿದ್ದ ಅಯ್ಯಪ್ಪ ಮಾಲಾಧಾರಿಗಳು ಮತ್ತು ಕೆಲ ಸ್ಥಳೀಯರು ಜೆಸಿಬಿಯನ್ನು ವಾಪಸ್ ಕಳುಹಿಸಿದ್ದಾರೆ. ಸದ್ಯ ಸ್ಥಳದಲ್ಲಿ ಅಯ್ಯಪ್ಪನ ಮೂರ್ತಿ ಹಾಗೇ ಇದ್ದು, ಕೃಷಿ ವಿಶ್ವವಿದ್ಯಾಲಯ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...