ರಾಧಿಕ ಆಪ್ಟೆ ಗರ್ಭಿಣಿ !

Date:

ರಾಧಿಕಾ ಆಪ್ಟೆ ಸದ್ಯಕ್ಕೆ ಸೈಲೆಂಟಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕಮಕ್‌ ಕಿಮಕ್‌ ಇಲ್ಲ. ವಿವಾದಗಳ ಬಗೆಗೂ ಚಕಾರ ಇಲ್ಲ.


ಯೆಸ್, ರಾಧಿಕಾ ಆಪ್ಟೆ ಬಾಲಿವುಡ್‌ನ ಸಕ್ಸಸ್‌ಫುಲ್ ನಟಿ. ವಿಶಿಷ್ಟ ಸಿನಿಮಾಗಳನ್ನು ಹುಡುಕುತ್ತಾ ತನ್ನದೇ ದಾರಿ ಹಿಡಿದು ಹೊರಟಿರೋ ರಾಧಿಕಾಗೆ ಒಳ್ಳೆಯ ಯಶಸ್ಸು ಸಿಕ್ಕಿದೆ. ಹೆಚ್ಚು ಕಡಿಮೆ ಬೋಲ್ಡ್ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುವ ಈ ನಟಿ ಕಥೆಗೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಸಿನಿಮಾದಲ್ಲಿ ಉದ್ದೇಶ ಪೂರ್ವಕವಾಗಿ ಎಕ್ಸ್‌ಪೋಸ್ ಮಾಡುವಂತಹ ನಟಿಯಲ್ಲ. ಆದರೂ ಹೆಚ್ಚಾಗಿ ಈಕೆ ಕಾಣಿಸಿಕೊಂಡಿರುವುದು ಬೋಲ್ಡ್‌ ಪಾತ್ರಗಳಲ್ಲೇ. ಕೆಲವೊಮ್ಮೆ ಈ ನಟಿಯ ಪಾತ್ರಗಳಷ್ಟೇ ಬೋಲ್ಡ್ ಇರುತ್ತೆ ಅಂತಲ್ಲ. ಕೊಡುವ ಹೇಳಿಕೆಗಳು ಕೂಡ ಅಷ್ಟೇ ಬೋಲ್ಡ್ ಇರುತ್ತೆ. ಆ ಕಾರಣಕ್ಕೆ ಆಗಾಗ ವಿವಾದ ಕೇಂದ್ರ ಬಿಂದುವಾಗುತ್ತಾರೆ. ಹಿಂದಿ ಅಷ್ಟೇ ಭಾರತದ ಹಲವು ಸಿನಿಮಾಗಳಲ್ಲಿಯೂ ರಾಧಿಕಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲವೊಮ್ಮೆ ಇವರ ವಿವಾದಕ್ಕೂ ಸಿಕ್ಕಿಕೊಂಡಿದೆ. ಅದರಲ್ಲೊಂದು ‘ದಿ ವೆಡ್ಡಿಂಗ್ ಗೆಸ್ಟ್’


ರಾಧಿಕಾ ಎರಡು ವರ್ಷಗಳ ಕೆಳಗೆ ಬ್ರಿಟಿಷ್ ಮ್ಯೂಸಿಕ್ ಕಂಪೋಸರ್‌, ವಯೊಲಿನಿಸ್ಟ್ ಬೆನೆಡಿಕ್ಟ್‌ ಟೇಲರ್‌ ಜೊತೆಗೆ ಮದುವೆ ಆದದ್ದು ಸುದ್ದಿಯಾಯ್ತು. ಹೇಳಿ ಕೇಳಿ ಅವರದು ಲಾಂಗ್‌ ಡಿಸ್ಟೆನ್ಸ್‌ ಮ್ಯಾರೇಜ್‌. ಅಂದ್ರೆ ಸದ್ಯ ಟ್ರೆಂಡಿಂಗ್‌ನಲ್ಲಿರೋ ದಾಂಪತ್ಯ. ಗಂಡ ಎಲ್ಲೋ ಒಂದು ಕಡೆ, ಹೆಂಡತಿ ಮತ್ತೆಲ್ಲೋ ಕಡೆ ಇರುವ ಸಂಬಂಧ. ಸೋ ಮದುವೆ ಆದರೂ ಗಂಡನ ಕಿರಿಕಿರಿ ಇಲ್ಲದೇ, ಸಾಂಸಾರಿಕ ತಾಪತ್ರಯಗಳಿಲ್ಲದೇ ರಾಧಿಕಾ ಆಪ್ಟೆ ಹಾಯಾಗಿ ತಾನಾಯ್ತು, ತನ್ನ ವೆಬ್‌ಸೀರೀಸ್‌ ಆಯ್ತು ಅಂತ ಇರಬೇಕಾದರೆ ಈ ಸುದ್ದಿ ಹರಿದಾಡ್ತಿದೆ. ಅದು ಮತ್ತೇನಲ್ಲ, ರಾಧಿಕ ಆಪ್ಟೆ ಗರ್ಭಿಣಿ ಅನ್ನೋ ವಿಚಾರ.

Share post:

Subscribe

spot_imgspot_img

Popular

More like this
Related

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ:...

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ ಭೇಟಿ

ದೀಪಾವಳಿ ಟೆಂಪಲ್ ರನ್‌ಗೆ ಡಿಕೆಶಿ ಸಿದ್ಧ – ಮಂತ್ರಾಲಯ, ರಾಯಚೂರಿಗೆ ನಾಳೆ...

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್...

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.!

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.! ಸೀತಾಫಲ (Custard Apple)...