ಸಲ್ಮಾನ್ ಖಾನ್ ಮತ್ತು ದಿಶಾ ಪಟಾನಿ ಅಭಿನಯದ ಹಾಗೂ ಪ್ರಭುದೇವ ನಿರ್ದೇಶನದ ರಾಧೆ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಕೊರೊನಾ ನಂತರ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳು ಸಹ ಧೈರ್ಯದಿಂದ ಮುಂದೆ ಬಂದು ಚಿತ್ರಗಳನ್ನು ಬಿಡುಗಡೆ ಮಾಡಿದವು. ಆದರೆ ಬಾಲಿವುಡ್ ನ ಯಾವೊಬ್ಬ ನಟನಿಗೂ ಸಹ ಕೊರೊನಾ ನಂತರ ಚಿತ್ರ ಬಿಡುಗಡೆ ಮಾಡುವ ಧೈರ್ಯ ಹುಟ್ಟಲೇ ಇಲ್ಲ. ಇದೀಗ ಈದ್ ಪ್ರಯುಕ್ತ ರಾಧೆ ಸಿನಿಮಾವನ್ನು ಬಿಡುಗಡೆ ಮಾಡ್ತೀವಿ ಅಂತ ಚಿತ್ರದ ನಿರ್ಮಾಪಕರು ಹೊಸ ಟ್ರೈಲರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಟ್ರೈಲರ್ ನಲ್ಲಿ ಹೊಸತನವೇನೂ ಇಲ್ಲ. ಮತ್ತದೇ ಬಿಲ್ಡಪ್ , ಫೈಟ್, ಡ್ರಗ್ ಕೇಸ್ ಸುತ್ತ ನಡೆಯುವ ಸ್ಟೋರಿ ಹಾಗೂ ಬಾಲಿವುಡ್ ಚಿತ್ರಗಳ ಹೃದಯಭಾಗವಾದ ಲಿಪ್ ಲಾಕ್! ಇನ್ನು ರಾಧೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದ ತುಂಬಾ ಟ್ರೋಲ್ ಗೆ ಒಳಗಾಗಿದೆ. ಒಂದಷ್ಟು ಜನ ಮತ್ತದೇ ಕಥೆಯುಳ್ಳ ಚಿತ್ರ ಇದು ಎಂದು ಟ್ರೋಲ್ ಮಾಡುತ್ತಿದ್ದರೆ, ಮತ್ತೊಂದಷ್ಟು ಜನ ತೆಲುಗಿನ ಡಿಜೆ ಚಿತ್ರದ ಸಿಟಿಮಾರ್ ಹಾಡನ್ನು ಈ ಚಿತ್ರದಲ್ಲಿ ಬಳಸಲಾಗಿರುವ ಕುರಿತು ಟ್ರೋಲ್ ಮಾಡುತ್ತಿದ್ದಾರೆ.
ಹೌದು ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಸೂಪರ್ ಹಿಟ್ ಚಲನ ಚಿತ್ರವಾದ ದುವ್ವಾಡ ಜಗನ್ನಾಥಮ್ ಚಿತ್ರದ ಸಿಟಿಮಾರ್ ಸಿಟಿಮಾರ್ ಹಾಡನ್ನು ನೀಟಾಗಿ ಎತ್ತಿ ಇಲ್ಲಿ ಕಾಪಿ ಪೇಸ್ಟ್ ಮಾಡಲಾಗಿದೆ. ಟ್ರೈಲರ್ ಮಧ್ಯದಲ್ಲಿ ಈ ಹಾಡಿನ ಸಾಲು ಮತ್ತು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬರಲಿದ್ದು ಸಾಕಷ್ಟು ಟ್ರೋಲ್ ಗಳಿಗೆ ಒಳಗಾಗಿದೆ. ಏನೇ ಆಗಲಿ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ರಾಧೆ ಸಿನಿಮಾದ ಟ್ರೈಲರ್ ಇಷ್ಟು ಕೆಳಮಟ್ಟದಲ್ಲಿ ಟ್ರೋಲ್ ಗೆ ಒಳಗಾಗುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಚಿತ್ರ ಬಿಡುಗಡೆಯಾಗಿ ಟ್ರೋಲ್ ಗಳ ಬಾಯಿ ಮುಚ್ಚಿಸುತ್ತಾ ಅಥವಾ ಟ್ರೈಲರ್ ಗಿಂತ ಸಿನಿಮಾ ಇನ್ನೂ ಕೆಟ್ಟದಾಗಿರುತ್ತಾ ಎಂಬುದನ್ನು ಕಾದು ನೋಡಬೇಕು.