ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ ನಲ್ಲಿ ಕಳೆದ ವಾರ ಬಿಡುಗಡೆಯಾಗಿರುವ ರಾಬರ್ಟ್ ಚಿತ್ರ ಇಂಡಸ್ಟ್ರಿಯ ಎಲ್ಲಾ ದಾಖಲೆಗಳನ್ನ ಬ್ರೇಕ್ ಮಾಡಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇರುವ ರಾಬರ್ಟ್ ಚಿತ್ರ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ.
ಬಾಕ್ಸಾಫೀಸ್ ನಲ್ಲಿ ಈಗಾಗಲೇ ಐವತ್ತು ಕೋಟಿ ದಾಟಿರುವ ರಾಬರ್ಟ್ ಚಿತ್ರ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಇದೀಗ ಹರಿದಾಡುತ್ತಿರುವ ಹೊಸ ಸುದ್ದಿಯ ಪ್ರಕಾರ ರಾಬರ್ಟ್ ಬಾಕ್ಸಾಫೀಸ್ ಕಲೆಕ್ಷನ್ ಮಾತ್ರವಲ್ಲದೆ ಪಾರ್ಕಿಂಗ್ ಕಲೆಕ್ಷನ್ ನಲ್ಲಿ ಕೂಡ ದಾಖಲೆ ಬರೆದಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ರಾಬರ್ಟ್ ಚಿತ್ರ ಪ್ರದರ್ಶನವಾಗುತ್ತಿರುವ ಎಲ್ಲಾ ಚಿತ್ರಮಂದಿರ ಮತ್ತು ಮಾಲ್ ಗಳ ಪಾರ್ಕಿಂಗ್ ಕಲೆಕ್ಷನ್ 3 ಕೋಟಿ ಗಡಿ ದಾಟಿದೆ ಎಂದು ಹೇಳಲಾಗುತ್ತಿದೆ. ಬಿಡುಗಡೆಯಾಗಿ 1 ವಾರ ಕಳೆಯುವುದರೊಳಗೆ ಪಾರ್ಕಿಂಗ್ ಕಲೆಕ್ಷನ್ 3 ಕೋಟಿ ದಾಟಿದೆ ಎಂದರೆ ಚಿತ್ರವನ್ನ ದೊಡ್ಡಮಟ್ಟದಲ್ಲಿಯೇ ವೀಕ್ಷಕರು ವೀಕ್ಷಿಸುತ್ತಿದ್ದಾರೆ ಎಂದರ್ಥ..