ರಾಬರ್ಟ್ ರಿಲೀಸ್ ಗೆ ಮುಹೂರ್ತ ಫಿಕ್ಸ್..!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಒಂದಾದ ಮೇಲೊಂದು ಸಿನಿಮಾಗಳನ್ನು ಕೊಡ್ತಿದ್ದಾರೆ. 2019 ರಲ್ಲಿ ಯಜಮಾನ, ಕುರುಕ್ಷೇತ್ರ , ಒಡೆಯ ಹೀಗೆ ಮೂರು ಬ್ಯಾಕ್ಟು ಬ್ಯಾಕ್ ಸಿನಿಮಾಗಳನ್ನು ಕೊಟ್ಟಿದ್ದರು. ಕುರುಕ್ಷೇತ್ರದಲ್ಲಂತೂ‌ ಸುಯೋಧನನಾಗಿ ದಚ್ಚು ಅಬ್ಬರಿಸಿದ್ರು.
2020 ರಲ್ಲಿ ಅವರ ಬಹುನೀರಿಕ್ಷಿತ ರಾಬರ್ಟ್ ಸಿನಿಮಾದ್ದೇ ಮಾತು. ಕಳೆದ ವರ್ಷ ಸಿನಿಮಾ ಅನೌನ್ಸ್ ಆದಲಿಂದಲೂ ಒಂದರ ಮೇಲೊಂದು ಸ್ಪೆಷಲ್ ಸುದ್ದಿ ರಾಬರ್ಟಿಂದ ಬರುತ್ತಲೇ ಇತ್ತು.‌ಪೋಸ್ಟರ್ ನಿಂದಲೇ ಸಖತ್ ಸದ್ದು ಮಾಡಿತ್ತು. ನಿನ್ನೆ ದರ್ಶನ್ ಬರ್ತ್ ಡೇ ಪ್ರಯುಕ್ತ ರಿಲೀಸ್ ಆದ ಟ್ರೈಲರ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ನಡುವೆ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂಬ ಕುತೂಹಲಕ್ಕೂ ಉತ್ತರ ಸಿಕ್ಕಿದೆ.
ನಿನ್ನೆ ಅಭಿಮಾನಿಗಳ ಜೊತೆ‌ ಹುಟ್ಟುಹಬ್ಬ ಆಚರಿಸಿಕೊಂಡ‌ ದರ್ಶನ್ ಆ ಸಂಭ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿನಿಮಾ ರಿಲೀಸ್ ಕುರಿತ ವಿಷಯ ಕೂಡ ರಿವೀಲ್ ಮಾಡಿದರು.
ಶೂಟಿಂಗ್ ಮುಗಿದಿದೆ, ಡಬ್ಬಿಂಗ್ ಸ್ವಲ್ಪ ನಡೀತಾ ಇದೆ.‌ಇನ್ನೇನು ಏಪ್ರಿಲ್ ನಲ್ಲಿ ಬಂದ್ ಬಿಡ್ತೀವಿ ಎನ್ನುವ ಮೂಲಕ ರಾಬರ್ಟ್ ರಿಲೀಸ್ ಮುಹೂರ್ತ ತಿಳಿಸಿದರು.

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...