“ರಾಮನಗರ, ಮಂಡ್ಯ, ಹಾಸನಕ್ಕೆ ಕೋಟಿ ಕೋಟಿ ಕೊಡ್ತಾರೆ, ವಾಸ್ತವ್ಯಕ್ಕೆ ಉತ್ತರ ಕರ್ನಾಟಕಕ್ಕೆ ಬರ್ತಾರೆ”!?

Date:

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾವಿರಾರು ಕೋಟಿ ಅನುದಾನವನ್ನು ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಿಗೆ ನೀಡಿ ವಾಸ್ತವ್ಯ ಮಾಡಲು ಮಾತ್ರ ಉತ್ತರ ಕರ್ನಾಟಕಕ್ಕೆ ಬರುತ್ತಾರೆ ಎಂದು ಶಾಸಕ ಶಿವನಗೌಡ ನಾಯಕ್ ಆರೋಪಿಸಿದ್ದಾರೆ.

ಇದೇ 26ರಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕೆರೆಗುಡ್ಡೆ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಈ ಭಾಗಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕಾಗಿತ್ತು.ಆದರೆ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಅನುದಾನ ಮೀಸಲಿಟ್ಟು ಈಗ ಈ ಭಾಗದಲ್ಲಿ ವಾಸ್ತವ್ಯ ಮಾಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ಇಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಅನುದಾನವಿಲ್ಲದೆ ಸ್ಥಗಿತಗೊಂಡಿವೆ. ಸಮರ್ಪಕ ಬರ ಕಾಮಗಾರಿಗಳು ನಡೆದಿಲ್ಲ.ಕುಡಿಯುವ ನೀರಿನ ಸಮಸ್ಯೆ ಇದೆ. ಈ ಎಲ್ಲವನ್ನೂ ಮುಂದಿಟ್ಟುಕೊಂಡು ನಾಳೆ ಗೂಗಲ್ ಗ್ರಾಮದಿಂದ 25 ಸಾವಿರ ಜನರೊಂದಿಗೆ ಕೆರೆಗುಡ್ಡೆ ಗ್ರಾಮಕ್ಕೆ ಪಾದಯಾತ್ರೆ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಪಾದಯಾತ್ರೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಷ್ಟೇ ಅಲ್ಲ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಯಚೂರು,ಜೂ 23- ನೀತಿ ಸಂಹಿತೆ ಇದ್ದ ಕಾರಣ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಿತ್ತೇ ಹೊರತು ಯಾವ ಕೆಲಸಗಳು ನಿಂತಿಲ್ಲ. ಶಾಸಕ ಶಿವನಗೌಡ ನಾಯಕ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

Share post:

Subscribe

spot_imgspot_img

Popular

More like this
Related

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್ ದೇವನಹಳ್ಳಿ:...

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...