ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಬಳಿಯ ಕ್ಲಾರ್ಕ್ ಎಕ್ಸಾಟಿಕ ರೆಸಾರ್ಟ್‌ನಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ 1 ಕೋಟಿ ರೂ. ದೇಣಿಗೆ ನೀಡಿದರು.
ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಮಾತನಾಡಿ, ಯಾವುದೇ ಜಾತಿ-ಧರ್ಮ ಇಲ್ಲದೆ, ತಮ್ಮ ಕಾಯಕದಲ್ಲಿಒಂದಿಷ್ಟು ಸಮಾಜ ಸೇವೆಗೆ ಮುಡಿಪಾಗಿಡಲಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗುವುದು. ಮನುಕುಲ ಎಲ್ಲ ಒಂದೇ, ಹುಟ್ಟಿನಲ್ಲಿ ಯಾರು ಸಹ ಇದೇ ಧರ್ಮದಲ್ಲಿ ಹುಟ್ಟುತ್ತೇನೆ ಎಂದು ಅಂದುಕೊಂಡಿರುವುದಿಲ್ಲ. ಇರುವಾಗ ಪ್ರಾಮಾಣಿಕವಾಗಿ ತಮ್ಮ ಕೈಲಾದಷ್ಟು ಸಹಾಯವನ್ನು ನೊಂದವರಿಗೆ ನೀಡುವ ಗುಣವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಕನ್ನಮಂಗಲ ಮುಖಂಡ ಮಂಜುನಾಥ್ ಟಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಕನ್ನಮಂಗಲದ ಸಮಾಜ ಸೇವಕಿ ಅನುರಾಧ, ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ಆರ್.ನಾಗೇಶ್, ಉಪಾಧ್ಯಕ್ಷೆ ನವಿತಾ ಇದ್ದರು.
ಬಾಲಿವುಡ್ ಮತ್ತು ಟಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಗೆಹನಾ ವಸಿಷ್ಠ ಅವರು ನೀಲಿ ಚಿತ್ರಗಳ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಮುಂಬೈ ಪೊಲೀಸರ ಅತಿಥಿ ಆಗಿರುವ ಈ ನಟಿಯ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ಯುವತಿಯರಿಗೆ ಹಣದ ಆಮಿಷವೊಡ್ಡಿ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಆಕೆ ಒತ್ತಾಯಿಸುತ್ತಿದ್ದರು ಎಂಬ ವಿಷಯ ಬಹಿರಂಗ ಆಗಿದೆ.
ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇಟ್ಟುಕೊಂಡು ಬರುವ ಹದಿಹರೆಯದ ಯುವತಿಯರಿಗೆ ಗೆಹನಾ ಹಣದ ಆಮಿಷ ಒಡ್ಡುತ್ತಿದ್ದರು. ಮಾಡೆಲ್‌ಗಳಿಗೆ 15ರಿಂದ 20 ಸಾವಿರ ರೂ.ಗಳವರೆಗೆ ಹಣ ನೀಡುತ್ತಿದ್ದರು. ನಂತರ ಅವರನ್ನು ‘ಅಂತಹ’ ದೃಶ್ಯಗಳಲ್ಲಿ ನಟಿಸುವಂತೆ ಮಾಡುತ್ತಿದ್ದರು. ಹೀಗೆ ಶೂಟಿಂಗ್ ಮಾಡಿಕೊಂಡ ನೀಲಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ಅವುಗಳಿಂದ ಗೆಹನಾ ಹಣ ಗಳಿಸುತ್ತಿದ್ದರು ಎನ್ನಲಾಗಿದೆ.
ಅಶ್ಲೀಲ ದೃಶ್ಯಗಳನ್ನು ಚಿತ್ರಿಸಿ ಅವುಗಳನ್ನು ತಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಗೆಹನಾರನ್ನು ಬಂಧಿಸಲಾಗಿದೆ. 87ಕ್ಕೂ ಹೆಚ್ಚು ವಿಡಿಯೋಗಳನ್ನು ಅವರು ಅಪ್‌ಲೋಡ್ ಮಾಡಿದ್ದಾರೆ. ಈ ವೆಬ್‌ಸೈಟ್‌ಗೆ ಚಂದಾದಾರರಾಗಲು ಬಯಸುವವರು 2 ಸಾವಿರ ರೂ. ನೀಡಬೇಕಿತ್ತು. 36 ಲಕ್ಷ ರೂ. ಹೊಂದಿರುವ ಗೆಹನಾ ಅವರ ಮೂರು ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ಈಗ ಕಣ್ಣಿಟ್ಟಿದ್ದಾರೆ. ಈ ವೆಬ್‌ಸೈಟ್‌ನಿಂದಲೇ ಗೆಹನಾ ಇಷ್ಟು ಹಣ ಸಂಪಾದಿಸಿದ್ದರು ಎನ್ನಲಾಗಿದೆ.
ಆದರೆ ಈ ಯಾವ ಆರೋಪಗಳನ್ನೂ ಗೆಹನಾ ವಸಿಷ್ಠ ಒಪ್ಪಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರ ಲೀಗಲ್ ಟೀಮ್ ಒಂದು ಹೇಳಿಕೆ ಬಿಡುಗಡೆ ಮಾಡಿದೆ. ‘ಗೆಹನಾ ವಸಿಷ್ಠ ನಿರಪರಾಧಿ. ಯಾವುದೇ ಅಶ್ಲೀಲ ಸಿನಿಮಾ ಹಗರಣದಲ್ಲಿ ಅವರು ತೊಡಗಿಕೊಂಡಿಲ್ಲ. ಅವರನ್ನು ದುರುದ್ದೇಶದಿಂದ ಸಿಕ್ಕಿಸಲಾಗಿದೆ. ಅವರ ಹೆಸರಿಗೆ ಕಳಂಕ ತರಬೇಕು ಎಂಬ ಉದ್ದೇಶದಿಂದ ವಿರೋಧಿಗಳು ಈ ರೀತಿ ಮಾಡಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.