ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಪರಾರಿಯಾಗಿರುವ ಬಾಂಬರ್ ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸಿದ ದೃಶ್ಯ ಈಗ ಸೆರೆಯಾಗಿದೆ. ಬೆಳಗ್ಗೆ 11:32ಕ್ಕೆ ರಾಮೇಶ್ವರಂ ಕೆಫೆಯನ್ನು ಪ್ರವೇಶಿಸಿ ರವೆ ಇಡ್ಲಿಯನ್ನು ಖರೀದಿಸುತ್ತಾನೆ. ಕೇವಲ 9 ನಿಮಿಷದಲ್ಲಿ ರವೆ ಇಡ್ಲಿ ತಿಂದ ಬಾಂಬರ್ ಬಂಬ್ ಇಟ್ಟು 11:41ಕ್ಕೆ ಕೆಫೆಯಿಂದ ತೆರಳುತ್ತಾನೆ. ನಂತರ ಈತ ಕುಂದಲಹಳ್ಳಿಯಿಂದ ಕಾಡುಗೋಡಿಗೆ ಹೋಗುವ ವೋಲ್ವೋ ಬಸ್ಸು ಹತ್ತಿದ್ದಾನೆ.
KA 01 F 4517 ನಂಬರಿನ ಬಸ್ ಹತ್ತಿ ನಂತರ ಮಧ್ಯ ಭಾಗಕ್ಕೆ ಬಂದಿದ್ದಾನೆ. ಮಧ್ಯ ಭಾಗಕ್ಕೆ ಬಂದ ನಂತರ ಬಸ್ಸಿನಲ್ಲಿ ಸಿಸಿಟಿವಿ ಇರುವುನ್ನು ನೋಡುತ್ತಾನೆ. ಮಧ್ಯ ಭಾಗದಲ್ಲಿ ಕುಳಿತುಕೊಂಡರೆ ನಾನು ಸೆರೆಯಾಗುತ್ತೇನೆ ಎಂಬುದನ್ನು ಅರಿತ ಆರೋಪಿ ಮುಂದುಗಡೆ ಡ್ರೈವರ್ ಬಳಿ ಇರುವ ಸೀಟಿನಲ್ಲಿ ಕುಳಿತುಕೊಂಡಿದ್ದಾನೆ. ಸಾಧ್ಯವಾದಷ್ಟು ಆತುರ ಆತುರವಾಗಿಯೇ ಬಸ್ಸಿನಲ್ಲಿ ಬಾಂಬರ್ ಓಡಾಡಿದ್ದಾನೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: ವೋಲ್ಲೋ ಬಸ್ಸಿನಲ್ಲಿ ಪ್ರಯಾಣಿಸಿದ್ದ ಶಂಕಿತ ಉಗ್ರ
Date: