ಟಾಲಿವುಡ್ ನ ಸ್ಟಾರ್ ರಾಮ್ ಚರಣ್ ಮತ್ತು ಸಮಂತಾ ಕನ್ನಡಕ್ಕೆ ಬಂದು ಬಿಟ್ಟಿದ್ದಾರೆ.
ಟಾಲಿವುಡ್ ನ ತಾರೆಯರು ಕನ್ನಡದಲ್ಲಿ ಸಿನಿನಾ ಮಾಡ್ತಿದ್ದಾರೆ ಎಂದು ಅಂದುಕೊಳ್ಳಬೇಡಿ. ವಿಷಯ ಬೇರೆನೇ ಇದೆ.
ಸಮಂತಾ- ರಾಮ್ ಚರಣ್ ಅಭಿನಯದ ತೆಲುಗಿನ ಸೂಪರ್ ಹಿಟ್ ಸಿನಿನಾ ‘ರಂಗಸ್ಥಲಂ’ ಸೂಪರ್ ಹಿಟ್ ಸಿನಿಮಾ.
2018 ರಲ್ಲಿ ತೆರೆಕಂಡ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ.
ಈ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಸಿನಿಮಾದ ಹಾಡೊಂದು ಈಗಾಗಲೇ ಕನ್ನಡಕ್ಕೆ ಬಂದಿದೆ. ಲಹರಿ ಸಂಸ್ಥೆಯ ಯೂ ಟ್ಯೂಬ್ ನಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿದೆ.
ಅಜಾದ್ ವರದರಾಜ್ ಅವರು ಎಂಥಾ ಮುದ್ದಾಗಿದ್ದೀಯೇ ಎನ್ನುವ ಹಾಡಿಕೆ ಕನ್ನಡ ಲಿರಿಕ್ ಬರೆದಿದ್ದಾರೆ. ಈ ಹಾಡಿನ ಕನ್ನಡ ವರ್ಷನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಗಾಯಕ ಸಾಗರ್ ಹಾಡಿಗೆ ಧ್ವನಿಯಾಗಿದ್ದಾರೆ.
ರಂಗಸ್ಥಲಂ ಸುಕಮಾರ್ ನಿರ್ದೇಶನದ ಚಲನಚಿತ್ರ.ಈ ಸಿನಿಮಾದಲ್ಲಿ ಸಮಂತಾ, ರಾಮ್ ಚರಣ್ ಅವರಲ್ಲದೆ ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ತಾರಬಣದಲ್ಲಿದ್ದರು.
ಈಗ ಈ ಚಿತ್ರ ಡಬ್ ಆಗಿ ಕನ್ನಡಕ್ಕೆ ಬರುತ್ತಿದೆ. ಕನ್ನಡ ಪ್ರೇಕ್ಷಕರು ಯಾವ ರೀತಿ ಒಪ್ಪಿಕೊಳ್ಳುತ್ತಾರೆ ಕಾದುನೋಡಬೇಕು