ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 370ನೇ ವಿಧಿಯನ್ನು ರದ್ದುಪಡಿಸಿದ್ದನ್ನು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸರ್ಕಾರ ವಿರೋಧಿಸಿತ್ತು . ಇದೀಗ ಪಾಕಿಸ್ತಾನ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೆಸರಿದೆ ಎಂದು ಕೇಳಿ ಬರುತ್ತಿದೆ . ಪಾಕಿಸ್ತಾನ ಮತ್ತೆ ಸುಳ್ಳುಗಳನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬ ಅನುಮಾನ ಕೂಡ ಕಾಡ್ತಾ ಇದೆ .
ಶ್ರೀನಗರಕ್ಕೆ ಬಂದಿಳಿದ ಸಂದರ್ಭದಲ್ಲಿ ವಿಪಕ್ಷಗಳ ನಾಯಕರಿಗೆ ಮತ್ತು ಪತ್ರರ್ತರಿಗೆ ಕಠಿಣ ಕಾನೂನು ಹೇರಿಕೆಯ ಮತ್ತು ಬಲಪ್ರದರ್ಶನದ ಮೂಲಕ ಎಲ್ಲರ ಹಕ್ಕುಗಳನ್ನು ದಮನಿಸಿರುವ ಸ್ಥಿತಿಯ ನೈಜ ದರ್ಶನವಾಯ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು ಈ ಹೇಳಿಕೆ ರಾಹುಲ್ ಗಾಂಧಿ ಯಾಕೆ ಕೊಟ್ಟರು ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಕೇಳಿ ಬರ್ತಾ ಇದೆ .