ಒಂದೇ ಒಂದು ಫೋಟೋದಿಂದ ಸಿಕ್ಕಿಬಿದ್ದ ಕೆ.ಎಲ್.ರಾಹುಲ್

Date:

ಭಾರತೀಯ ಕ್ರಿಕೆಟಿಗ ಕೆಎಲ್‌ ರಾಹುಲ್ ಅವರು ಇಂಗ್ಲೆಂಡ್‌ ಪ್ರವಾಸಕ್ಕಾಗಿ ಸೌಥಾಂಪ್ಟನ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಕೆಎಲ್ ರಾಹುಲ್. ಅಥಿಯಾ ಶೆಟ್ಟಿ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಹಾಗಾದರೆ ಆ ಪ್ರಶ್ನೆಗಳು ಏನು?
ಕೆಎಲ್ ರಾಹುಲ್ ಜೊತೆಗೆ ಸುನೀಲ್ ಶೆಟ್ಟಿ ಮಗಳು!


ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಪ್ರಶಸ್ತಿ ಸುತ್ತಿನ ಹೋರಾಟ ಹಾಗೂ ಆತಿಥೇಯರ ಎದುರಿನ ಟೆಸ್ಟ್ ಸರಣಿಗಾಗಿ ಭಾರತ ತಂಡ ಸುದೀರ್ಘವಾದ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಭಾರತ ತಂಡದಲ್ಲಿ ಕೆಎಲ್ ರಾಹುಲ್ ಕೂಡ ಇದ್ದಾರೆ. ಇನ್ನು ಕ್ರಿಕೆಟಿಗರು ಪತ್ನಿ, ಮಕ್ಕಳು ಮನೆಯವರನ್ನು ಕರೆದುಕೊಂಡು ಹೋಗಲು ಅವಕಾಶ ನೀಡಿದೆ. ಹೀಗಾಗಿ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಕೂಡ ಕೆಎಲ್ ರಾಹುಲ್ ಜೊತೆಗೆ ಹೋಗಿದ್ದಾರೆ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ನಟಿ ಅನುಷ್ಕಾ ಶೆಟ್ಟಿ, ವಿರಾಜ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ನತಾಶಾ ಮುಂತಾದ ದಂಪತಿಗಳು ಇದ್ದಾರೆ.
ಇನ್ನು ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಕಳೆದ ಎರಡು ದಿನಗಳಿಂದ ಪೋಸ್ಟ್ ಮಾಡುತ್ತಿರುವುದನ್ನು ನೋಡಿದಾಗ ರಾಹುಲ್ ಜೊತೆಗೆ ಅಥಿಯಾ ಕೂಡ ಹೋಗಿರೋದು ಕಣ್ಣಿಗೆ ಬಿದ್ದಿದೆ. ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಪೋಸ್ಟ್‌ಗಳನ್ನು ನೋಡಿದ ನೆಟ್ಟಿಗರು ಕೂಡ “ರಾಹುಲ್ ಇರುವ ಜಾಗದಲ್ಲಿ ನೀವು ಕೂಡ ಇದ್ದೀರಿ, ಅಥಿಯಾಗೆ ಫೋಟೋ ಕ್ರೆಡಿಟ್ ಕೊಡಿ, ಇಂಗ್ಲೆಂಡ್‌ಗೆ ಅಥಿಯಾ ಕೂಡ ಹೋಗಿದ್ದಾರಾ?” ಮುಂತಾದ ಕಾಮೆಂಟ್‌ಗಳನ್ನು ಹಾಕಿದ್ದಾರೆ.


2019ರಿಂದ ಅಥಿಯಾ ಶೆಟ್ಟಿ, ಕೆಎಲ್ ರಾಹುಲ್ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ, ಅನೇಕ ಬಾರಿ ಈ ಜೋಡಿ ಒಟ್ಟಾಗಿ ಕ್ಯಾಮರಾ ಕಣ್ಣಿಗೂ ಬಿದ್ದಿದೆ. ನಟ ಸೂರಜ್ ಪಂಚೋಲಿ ಜೊತೆಗೆ ಅಥಿಯಾ ಶೆಟ್ಟಿ ಅವರು 2015ರಲ್ಲಿ ‘ಹೀರೋ’ ಸಿನಿಮಾದಲ್ಲಿ ನಟಿಸಿದ್ದರು, ಅದು ಅವರ ಮೊದಲ ಸಿನಿಮಾ. ಕೊನೆಯದಾಗಿ ನವಾಜುದ್ದೀನ್ ಸಿದ್ಧಿಕಿ ಜೊತೆಗೆ ‘ಮೋಟಿಚೂರ್ ಚಕ್ನಾಚೂರ್’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...