17ನೇ ವಯಸ್ಸಿಗೆ ಕಾಲೇಜು ಡ್ರಾಪ್ಔಟ್; 22ರಲ್ಲಿ ಕೋಟಿ ಕೋಟಿ ಒಡೆಯ!

Date:

 

ಜೀವನದಲ್ಲಿ ನಾವು ಯಶಸ್ಸಿನ ಶಿಖರವನ್ನೆರಬೇಕಾದರೆ ಕನಸುಗಳು ಮತ್ತು ಸಮರ್ಪಣೆ ಭಾವನೆಯನ್ನು ಸರಿಯಾದ ರೀತಿಯಲ್ಲಿ ಸಂಯೋಜನೆ ಮಾಡಬೇಕು. ಈ ಹೇಳಿಕೆಗೆ ಜೀವಂತ ಸಾಕ್ಷಿಗಳಲ್ಲಿ OYO ROOMS ಕಂಪನಿಯ ಸಂಸ್ಥಾಪಕ ಮಾಲೀಕ ಮತ್ತು ಸಿಇಓ ಆಗಿರುವ ರಿತೇಶ್ ಅಗರ್ ವಾಲ್ ಅವರು ಸಹ ಒಬ್ಬರಾಗಿದ್ದಾರೆ. ರಿತೇಶ್ ಈಗ ಯುವ ಉದ್ಯಮಿಗಳಿಗೆ ಮಾತ್ರವಲ್ಲದೆ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂಬ ಮನಸ್ಸಿನಲ್ಲಿರುವ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಯುವ ಉದ್ಯಮಿ ರಿತೇಶ್ಅವರ ಜನನ ಒರಿಸ್ಸಾದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಆಗುತ್ತದೆ. ಇವರಿಗೆ ಬಾಲ್ಯದಿಂದಲೂ ಸಾಫ್ಟವೇರ್ ಪ್ರೋಗ್ರಾಮಿಂಗ್ ನಲ್ಲಿ ಬಹಳ ಆಸಕ್ತಿ ಇತ್ತು. ಕಾಲೇಜನ್ನು ಬಿಟ್ಟು ರಿತೇಶ್ ಅವರು ಓರವಲ್ ಸ್ಟೈಸ್ ಪ್ರೈವೇಡ್ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪಿಸಿದರು. ಓಯೋ ರೂಮ್ಸ್ ಆ್ಯಪ್ ಬಗ್ಗೆ ಬಹುತೇಕ ಜನರಿಗೆ ತಿಳಿದಿರುತ್ತದೆ. ಹೋಟೆಲ್ ಬುಕಿಂಗ್ ಮಾಡುವ ಓಯೋ ಆ್ಯಪ್ ನ್ನು ಅಭಿವೃದ್ಧಿಪಡಿಸಿದ್ಧಾರೆ ರಿತೇಶ್ ಅಗರ್ ವಾಲ್.
17ನೇ ವಯಸ್ಸಿನಲ್ಲಿ ಕಾಲೇಜನ್ನು ಬಿಟ್ಟು ತನ್ನ ಕನಸನ್ನು ಬೆನ್ನಟ್ಟಿದವರು. ತನ್ನ ಎಂಟನೇ ವಯಸ್ಸಿನಲ್ಲಿ ಸಾಫ್ಟವೇರ್ ಪ್ರೋಗ್ರಾಮ್ ಗಳ ಕೋಡ್ ಅನ್ನು ಬರೆಯಲು ಪ್ರಾರಂಭಿಸಿದರು. ಇವರು ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ದೆಹಲಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇರಿಕೊಂಡರು. ಅವರು ಎರಡ್ಮೂರು ದಿನಗಳ ಕಾಲ ಕಾಲೇಜಿಗೆ ತೆರಳಿದರು ಮತ್ತು ನಂತರ ಅವರು ಇಷ್ಟಪಡುವುದನ್ನು ಪ್ರಯತ್ನಿಸಲು ಮತ್ತೆ ಎರಡು ದಿನಗಳ ರಜಾದಿನವನ್ನು ತೆಗೆದುಕೊಳ್ಳಬೇಕು ಎಂದು ಅಂದುಕೊಂಡರು. ಆದರೆ, ಅವರು ಅದೇ ಕೊನೆಯ ಬಾರಿ ಕಾಲೇಜಿಗೆ ಹೋಗಿದ್ದು.


ರಿತೇಶ್ ಅಗರ್ ವಾಲ್ ತಮ್ಮ 17ನೇ ವಯಸ್ಸಿನಲ್ಲಿ ಇವರಿದ್ದ ಮನೆ ಬಾಡಿಗೆ ಕಟ್ಟಲು ಸಾಧ್ಯವಿಲ್ಲದ್ದಾಗ ಇವರನ್ನು ಮನೆ ಮಾಲೀಕರು ಹೊರಹಾಕಿದ್ದರು. ಒಂದೊಮ್ಮೆ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಹೋದಾಗ ಅಲ್ಲಿ ಕೆಟ್ಟ ವ್ಯವಸ್ಥೆಗೆ ತುಂಬಾ ಹಣವನ್ನು ಬಿಲ್ ಮಾಡಿದ್ದರು. ಮತ್ತೊಂದು ಬಾರಿ ತುಂಬಾ ಚೆನ್ನಾಗಿದ್ದ ವ್ಯವಸ್ಥೆಗೆ ಕಡಿಮೆ ಬಿಲ್ ಹಾಕಿದ್ದರು. ಈ ಘಟನೆ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅತಿ ಕಡಿಮೆ ದರದಲ್ಲಿ ಹೋಟೆಲ್ ಸೌಲಭ್ಯವನ್ನು ಕಲ್ಪಿಸಿಕೊಡುವ ವ್ಯವಹಾರವನ್ನು ಸಾಲ ಮಾಡಿ ಪ್ರಾರಂಭಿಸಿದರು. ಇವರ ಕೆಲಸಕ್ಕೆ ಮೆಚ್ಚಿದ ಫೈನಾಲ್ಸ್ ಕಂಪನಿಯೊಂದು ಇವರಿಗೆ 30 ಲಕ್ಷ ರೂಪಾಯಿಗಳ ಸಾಲವನ್ನು ನೀಡುತ್ತದೆ.
ನೋಡಿ, ಅಗರ್ ವಾಲ್ ತಮ್ಮ ಬುದ್ಧಿವಂತಿಕೆಯಿಂದ ಓಯೋ ಕಂಪನಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತಾರೆ. ಇತ್ತೀಚೆಗೆ ಫೋರ್ಬ್ಸ್ ರೂಪಿಸಿರುವ ಮೂವತ್ತು ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಭಾರತದ ಮತ್ತು ಭಾರತೀಯ ಮೂಲದ 45 ಯುವಕರು ಸ್ಥಾನ ಪಡೆದಿದ್ದಾರೆ. ಓಯೋ ರೂಮ್ಸ್ ರಿತೇಶ್ ಅಗರ್ ವಾಲ್ ಭಾರತೀಯರ ಪೈಕಿ ಮುಂಚೂಣಿಯಲ್ಲಿದ್ದಾರೆ. ಓಯೋ ರೂಮ್ಸ್ ಭಾರತದ ಅತಿದೊಡ್ಡ ಹೋಟೆಲ್ ವಸತಿ ಜಾಲವಾಗಿದ್ದು, 160 ನಗರಗಳಲ್ಲಿ ತನ್ನ ಸೇವೆಯನ್ನು ಒದಗಿಸುತ್ತಿದೆ.
ಇನ್ನು ರಿತೇಶ್ ಕನಸಾದ ಓಯೋ ರೂಮ್ಸ್ ಕಂಪನಿ ಬರೋಬ್ಬರಿ 360 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಮಾಡುತ್ತಿದೆ. ಸದ್ಯ ಓಯೋ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ. ಪರಿಣಾಮ ಈ ಸೇವೆ ಇದೀಗ ಮಲೇಷ್ಯಾ, ಚೀನಾ, ಇಂಡೋನೇಷ್ಯಾ, ನೇಪಾಳ, ದುಬೈ ಹಾಗೂ ಲಂಡನ್ ಗೂ ವಿಸ್ತರಣೆಯಾಗಿದೆ. ಏನೇ ಹೇಳಿ, 17ನೇ ವಯಸ್ಸಲ್ಲೇ ಕಾಲೇಜು ಡ್ರೌಪೋಟ್ ಮಾಡಿದ 22ರ ಯುವಕ ವಾರ್ಷಿಕ 360 ಕೋಟಿ ವಹಿವಾಟು ನಡೆಸುತ್ತಿದ್ದಾನೆ ಎಂದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ಯಾವುದೀದೆ ಅಲ್ಲವೇ?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...