ಎರಡು ವರ್ಷಗಳ ಐ ಲವ್ ಯು ಚಿತ್ರದಲ್ಲಿ ರಿಯಲ್ ಸ್ಟಾರ್ ಉಪ್ಪಿ ಕಾಣಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಇದರ ನಡುವೆಯು ಉಪ್ಪಿ ಮತ್ತೊಂದು ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಈ ಚಿತ್ರಕ್ಕೆ ಟೈಟಲ್ ಫೈನಲ್ ಆಗಿಲ್ಲ. ಮೇ 24 ರಿಂದ ಚಿತ್ರಕ್ಕೆ ಅಧಿಕೃತವಾಗಿ ಚಿತ್ರೀಕರಣ ಶುರು ಎನ್ನಲಾಗಿದೆ. ಈ ಹಂತದಲ್ಲೀಗ ಚಿತ್ರ ತಂಡವು ಬಾಕಿ ಉಳಿದ ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿದೆ. ವಿಶೇಷ ಅಂದ್ರೆ ಚಿತ್ರಕ್ಕೆ ವಿಲನ್ ಆಗಿರೋದು ‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ. ಇದೊಂದು ಮಾಸ್ ಶೈಲಿಯ ಸಿನಿಮಾವಾಗಿದ್ದು ಚಿತ್ರದಲ್ಲಿ ಉಪ್ಪಿ ಎದುರಾಗಿ ಆದಿತ್ಯ ತೊಡೆತಟ್ಟಲಿದ್ದಾರೆ. ಉಪೇಂದ್ರ ಮತ್ತೆ ಬಾ, ಹಾಲಿವುಡ್, ಗಾಡ್ ಫಾದರ್ ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ಮಿಂಚಿದ್ದ ಉಪ್ಪಿ ಮತ್ತೊಮ್ಮೆ ಡಬಲ್ ಗೆಟಪ್ನಲ್ಲಿ ಕಮಾಲ್ ಮಾಡೋಕೆ ರೆಡಿಯಾಗ್ತಿದ್ದಾರೆ. ಇನ್ನು ಚಿತ್ರಕ್ಕೆ ನಾಯಕಿಯಾಗಿ ಸೋನಾಲ್ ಮಾಂತೇರಿಯಾ ಜೊತೆಯಾಗಲಿದ್ದಾರೆ ಅಂತಾ ಹೇಳಲಾಗ್ತಿದೆ. ಈ ತನಕ ಉಪೇಂದ್ರ ಒಬ್ಬರೇ ಫೈನಲ್ ಆಗಿದ್ದು. ಇದೀಗ ಉಳಿದ ಪಾತ್ರಧಾರಿಗಳ ಆಯ್ಕೆ ನಡೆಯುತ್ತಿದೆ. ನಾಯಕಿಯೂ ಸೇರಿ ಇನ್ನು ಪೋಷಕ ಪಾತ್ರಗಳಿಗೂ ಕಲಾವಿದರ ಆಯ್ಕೆ ಬಾಕಿಯಿದೆ. ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಈಗ ಸ್ಟಾರ್ ಸಿನಿಮಾಗಳ ನಿರ್ಮಾಪಕ. ಸಾಲು ಸಾಲು ಸಿನಿಮಾಗಳ ನಿರ್ಮಾಣದ ಜತೆಗೆ ಸಕ್ಸಸ್ಫುಲ್ ನಿರ್ಮಾಪಕ ಎನ್ನುವ ಖ್ಯಾತಿಯ ಅವರಿಗಿದೆ. ಇದೀಗ ಉಪ್ಪಿ ಕಾಂಬಿನೇಷನ್ ಹೊಸ ಸಿನಿಮಾಕ್ಕೆ ನಟ ಆದಿತ್ಯ ಅವರನ್ನೇ ವಿಲನ್ ಆಗಿ ಆಯ್ಕೆ ಮಾಡಿಕೊಂಡಿದ್ದು ಒಂದೆಡೆಯಾದರೆ, ಮುಂದಿನ ದಿನಗಳಲ್ಲಿ ಅವರನ್ನೇ ಹೀರೋ ಆಗಿಸಿಕೊಂಡು ಮತ್ತೊಂದು ಸಿನಿಮಾ ಮಾಡುವ ಸಿದ್ಧತೆಯಲ್ಲೂ ಇದ್ದಾರೆನ್ನಲಾಗಿದೆ. ಸದ್ಯಕ್ಕೆ ಅದಿನ್ನು ಅಧಿಕೃತಗೊಂಡಿಲ್ಲ. ಆದರೆ ಉಪ್ಪಿ ಜತೆಗಿನ ಅವರ ಹೊಸ ಸಿನಿಮಾದಲ್ಲಿ ಆದಿತ್ಯ ವಿಲನ್ ಆಗಿ ಕಾಣಿಸಿಕೊಳ್ಳುವುದಂತೂ ಖಚಿತ.
ರಿಯಲ್ ಸ್ಟಾರ್ ಉಪ್ಪಿಗೆ ವಿಲನ್ ಆದ ಡೆಡ್ಲಿ ಸೋಮ!
Date: