ರಿಯಾಯಿತಿ ದರದಲ್ಲಿ DSLR ಕ್ಯಾಮೆರಾ ಖರೀದಿಸಲು ಇದು ಸರಿಯಾದ ಸಮಯ

Date:

ಜನಪ್ರಿಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಎಂದರೇ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ನೆಚ್ಚಿನ ತಾಣ ಆಗಿದೆ. ಈ ದೈತ್ಯ ಪ್ಲಾಟ್‌ಫಾರ್ಮ್ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಸೇಲ್‌ ಆಯೋಜಿಸುವ ಮೂಲಕ ಆನ್‌ಲೈನ್ ಶಾಪಿಂಗ್ ಪ್ರಿಯರನ್ನು ಮತ್ತಷ್ಟು ಆಕರ್ಷಿಸುತ್ತದೆ. ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಇದೀಗ ಅಮೆಜಾನ್ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021 ಸೇಲ್‌ ಘೋಷಿಸಿದೆ. ಈ ಸೇಲ್‌ನಲ್ಲಿ ಗ್ಯಾಡ್ಜೆಸ್ಟ್‌ ಉತ್ಪನ್ನಗಳಿಗೆ ಸ್ಪೆಷಲ್ ರಿಯಾಯಿತಿ ತಿಳಿಸಿದೆ.

 

ಹೌದು, ಅಮೆಜಾನ್ ಸಂಸ್ಥೆಯು ಹಬ್ಬದ ಅಂಗವಾಗಿ ಗ್ರೇಟ್ ಇಂಡಿಯನ್ ಸೇಲ್ 2021 ಅನ್ನು ಘೋಷಿಸಿದೆ. ಈ ಸೇಲ್ ಇದೇ ಅಕ್ಟೋಬರ್ 3ರಂದು ಪ್ರಾರಂಭವಾಗಲಿದೆ. ಮಾರಾಟದಲ್ಲಿ ಎಲ್ಲ ಬಗೆಯ ಉತ್ಪನ್ನಗಳಿಗೆ ಆಕರ್ಷಕ ಆಫರ್‌ಗಳು ಲಭ್ಯವಾಗದೆ. ಇನ್ನು ಈ ಗ್ರೇಟ್ ಇಂಡಿಯನ್ ಸೇಲ್ 2021 ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ದೊಡ್ಡ ರಿಯಾಯಿತಿಯನ್ನು ನೀಡುತ್ತದೆ. ಅದರೊಂದಿಗೆ ಕ್ಯಾಮೆರಾ ಡಿವೈಸ್‌ಗಳಿಗೂ ಬೊಂಬಾಟ್ ಕೊಡುಗೆ ಲಭ್ಯವಾಗಲಿದೆ.

 

ಆನ್‌ಲೈನ್ ಶಾಪಿಂಗ್ ಪ್ರಿಯರು ಬಹುನಿರೀಕ್ಷೆಯಿಂದ ಎದುರು ನೋಡುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಆಯ್ದ ಕಂಪನಿಗಳ ಆಡಿಯೋ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ. ಪ್ರತಿಷ್ಠಿತ ಕಂಪನಿಗಳ ಕ್ಯಾಮೆರಾ ಡಿವೈಸ್‌ಗಳಿಗೆ ಶೇ 60% ವರೆಗೂ ಡಿಸ್ಕೌಂಟ್‌ ಸಿಗಲಿವೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಕ್ಯಾಮೆರಾ ಡಿವೈಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

 

ಕ್ಯಾನನ್ EOS 1500D 24.1 ಡಿಜಿಟಲ್ SLR ಕ್ಯಾಮೆರಾ: ಜನಪ್ರಿಯ ಕ್ಯಾಮೆರಾಗಳ ಪೈಕಿ ಇದು ಒಂದಾಗಿದ್ದು, ವೃತ್ತಿಪರರಿಗೆ ಸೂಕ್ತ ಎನಿಸಲಿದೆ. ಈ ಕ್ಯಾಮೆರಾವು 24.1 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, ISO ರೇಂಜ್ 100-6400 ಆಗಿದೆ. ಹಾಗೆಯೇ ಅಂತರ್ನಿರ್ಮಿತ ಮೊನೌರಲ್ ಮೈಕ್ರೊಫೋನ್, ವಾಯಿಸ್-ರೆಕಾರ್ಡಿಂಗ್ ಮಟ್ಟವನ್ನು ಸರಿಹೊಂದಿಸಬಹುದು, ವಿಂಡ್ ಫಿಲ್ಟರ್ ಒದಗಿಸಲಾಗಿದೆ.

ಸೋನಿ ಡಿಜಿಟಲ್ ವ್ಲಾಗ್ ಕ್ಯಾಮೆರಾ ZV 1 ಕ್ಯಾಮೆರಾ: ಕ್ಯಾಮೆರಾ ಉತ್ಪನ್ನಗಳಲ್ಲಿ ಸೋನಿ ಬ್ರ್ಯಾಂಡ್‌ನ ಹೆಸರು ಅತ್ಯುತ್ತಮ ಆಗಿದೆ. ಸೋನಿಯ ಈ ಕ್ಯಾಮೆರಾವು 20.1 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಹಾಗೆಯೇ ಕಾಂಪ್ಯಾಕ್ಟ್, ವಿಡಿಯೋ ಐ ಎಎಫ್, ಫ್ಲಿಪ್ ಸ್ಕ್ರೀನ್, ಅಂತರ್ನಿರ್ಮಿತ ಮೈಕ್ರೊಫೋನ್, ಬ್ಲೂಟೂತ್ ಶೂಟಿಂಗ್ ಗ್ರಿಪ್, 4 ಕೆ ವ್ಲಾಗಿಂಗ್ ಕ್ಯಾಮೆರಾ ಮತ್ತು ಕಂಟೆಂಟ್ ಕ್ರಿಯೇಶನ್ ಆಯ್ಕೆ ಹೊಂದಿದೆ.

 

ಫ್ಯೂಜಿಫಿಲ್ಮ್ ಇನ್ಸ್ಟಾಕ್ಸ್ ಮಿನಿ 9 ಇನ್‌ಸ್ಟಂಟ್ ಕ್ಯಾಮೆರಾ: ಈ ಇನ್‌ಸ್ಟಂಟ್ ಕ್ಯಾಮೆರಾವು ತ್ವರಿತವಾಗಿ ಕ್ರೆಡಿಟ್ ಕಾರ್ಡ್‌ ಗಾತ್ರದ ಫೋಟೊಗಳನ್ನು ನೀಡುತ್ತದೆ. ಆಟೋ ಪವರ್ ಆಫ್ ಸಮಯವನ್ನು ಇದು ಒಳಗೊಂಡಿದೆ. AA-size 1.5V alkaline ಬ್ಯಾಟರಿ ಹೊಂದಿದ್ದು, 100 ಶಾರ್ಟ್‌/ಕ್ಲಿಕ್ ಬೆಂಬಲ ಪಡೆದಿವೆ. ಅತ್ಯುತ್ತಮ ಸೆಲ್ಪಿ ಫೋಟೊಗಾಗಿ ಸೆಲ್ಫಿ ಮಿರರ್ ಹಾಗೂ ಕ್ಲೋಸ್‌ ಅಪ್ ಲೆನ್ಸ್ ಅಟ್ಯಾಚ್ ಮಾಡಲಾಗಿದೆ.

GoPro ಹೀರೋ 8 ಬ್ಲಾಕ್ಪಾಕೆಟ್‌ನಲ್ಲಿ ಇಡಬಹುದಾದ ರಚನೆಯನ್ನು ಈ ಕ್ಯಾಮೆರಾವು ಹೊಂದಿದ್ದು, ಇದೊಂದು ಆಕ್ಷನ್ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದು 4K, 2.7K 4: 3, 1440por 1080P ಮಾದರಿಯಲ್ಲಿ ವೀಡಿಯೊಗಳನ್ನು ಚಿತ್ರೀಕರಿಸಬಹುದಾಗಿದೆ. ಹಾಗೆಯೇ GoPro ಆಪ್ ಹೊಂದಿದ್ದು, ನೇರವಾಗಿ ಶೇರ್ ಮಾಡಬಹುದಾದ ಆಯ್ಕೆಗಳು ಇವೆ. ಇನ್ನು ಇದು 1080p ನಲ್ಲಿ ಲೈವ್ ಸ್ಟ್ರೀಮ್ ಸಪೋರ್ಟ್‌ ಪಡೆದಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಸ್ಲಾಟ್‌ ಆಯ್ಕೆಯು ಇದ್ದು, ಗ್ರಾಹಕರು ಬಳಕೆ ಮಾಡಬಹುದು.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...