ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಅವರ ಕಾಂಬಿನೇಷನ್ನ ಎರಡನೇ ಚಿತ್ರ ಪೈಲ್ವಾನ್ ನಿನ್ನೆ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ನಿನ್ನೆ ಬಿಡುಗಡೆಯಾದ ಪೈಲ್ವಾನ್ ಚಿತ್ರ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಹೀಗೆ ಎಲ್ಲ ಕಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವ ಪೈಲ್ವಾನ್ ಚಿತ್ರದ ಚಿತ್ರತಂಡ ಚಿತ್ರದ ಗೆಲುವನ್ನು ಸಂಭ್ರಮಿಸುವ ಸಮಯಕ್ಕೆ ಸರಿಯಾಗಿ ಬ್ಯಾಡ್ ನ್ಯೂಸ್ ಒಂದು ಬಂದಿದೆ.
ಹೌದು ನಿನ್ನೆ ಬಿಡುಗಡೆಯಾದ ಪೈಲ್ವಾನ್ ಚಿತ್ರ ನಿನ್ನೆ ರಾತ್ರಿ ವೇಳೆಗೆ ಪೈರಸಿ ಪ್ರಿಂಟ್ ಹೊರಬಿದ್ದಿದೆ. ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಸಹ ಚಿತ್ರಗಳ ಪೈರಸಿಯನ್ನು ಮಾತ್ರ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ದೊಡ್ಡ ದೊಡ್ಡ ಚಿತ್ರಗಳಿಗೇ ಈ ಪೈರಸಿ ಎಂಬ ಪೆಡಂಭೂತ ತೊಂದರೆ ಕೊಡುತ್ತಿದೆ. ಇನ್ನು ಪೈರಸಿ ಬಾಯಿ ಪೆಡಂಭೂತದಿಂದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ ಹೊರತಾಗಿಲ್ಲ ನಿನ್ನೆ ಈ ಚಿತ್ರದ ಪೈರಸಿ ಪ್ರಿಂಟ್ ಎಲ್ಲೆಡೆ ಹರಿದಾಡುತ್ತಿದೆ. ಇನ್ನು ಚಿತ್ರದ ಪೈರಸಿ ಪ್ರಿಂಟ್ ಹೊರಬಿದ್ದಿರುವುದು ಇದೀಗ ಚಿತ್ರತಂಡಕ್ಕೆ ದೊಡ್ಡ ಮಟ್ಟದ ತಲೆನೋವಾಗಿ ಪರಿಣಮಿಸಿದೆ.