ಮೈಸೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಪಿಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಬಯಕೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಹೀನಾಯವಾದ ರೀತಿಯಲ್ಲಿ ಕೊಲೆಯಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಪಿಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಬಯಕೆ. ಅಭಿಮಾನ ಅತಿರೇಕಕ್ಕೆ ಹೋದಾಗ ಅಸಹಿಷ್ಣತೆ ಉಂಟಾಗುತ್ತದೆ. ನಾನು ಹೇಳಿದ್ದು, ಸತ್ಯ ನನ್ನಂದಿಲ್ಲೇ ಎಲ್ಲ ಎಂಬ ಮನೋಭಾವನೆಗಳು ಬದಲಾಗಬೇಕು ಎಂದರು.
ಇನ್ನೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ. ಗ್ಯಾರಂಟಿಗಳಿಗಾಗಿ ಬೆಲೆ ಏರಿಸಿದ್ದೇವೆ ಅನ್ನೋದು ಸುಳ್ಳು. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣ ಅನಿರ್ವಾಯವಾಗಿದೆ. ಅದಕ್ಕಾಗಿ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿದ್ದೇವೆ. ಗ್ಯಾರಂಟಿ ನಿಲ್ಲಿಸುವುದು, ಪರಿಷ್ಕರಣೆ ಮಾಡುವುದು ಯಾವುದೂ ಇಲ್ಲ. ಇನ್ನು ಒಂದು ಎರಡು ವರ್ಷ ಆಗಲಿ ಆಗ ಮಾಡಬಹುದು. ಅಧ್ಯಯನ ಮಾಡಿ ಕೆಲ ಬದಲಾವಣೆ ಮಾಡಿಕೊಳ್ಳಬಹುದು. ಅಧ್ಯಯನ ಮಾಡದೆ ಮರುಪರಿಶೀಲನೆ ಎಂಬುದೆಲ್ಲ ಇಲ್ಲ ಎಂದು ತಿಳಿಸಿದರು.
ರೇಣುಕಾಸ್ವಾಮಿ ಪ್ರಕರಣ: ತಪಿಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಬಯಕೆ !
Date: