ರೇಣುಕಾಸ್ವಾಮಿ ಪ್ರಕರಣ; ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಟ ದರ್ಶನ್ ಜೊತೆಗೆ ಪವಿತ್ರಗೌಡ, ಲಕ್ಷ್ಮಣ್ ಹಾಗೂ ನಾಗರಾಜ್ ಜಾಮೀನು ಭವಿಷ್ಯ ಕೂಡ ನಿರ್ಧಾರ ಆಗಲಿದೆ.
ಈಗಾಗಲೇ ಮಧ್ಯಂತರ ಜಾಮೀನಿಮ ಮೇಲೆ ಹೊರಗಡೆ ಇದ್ದಾರೆ ನಟ ದರ್ಶನ್. ಆರು ವಾರಗಳ ಕಾಲ ಮೆಡಿಕಲ್ ಬೇಲ್ ಮೇಲೆ ದರ್ಶನ್ ಹೊರಗಡೆ ಇದ್ದಾರೆ. ಇಂದು ದರ್ಶನ್ ಪರವಾಗಿ ಸಿವಿ ನಾಗೇಶ್ ವಾದ ಮಂಡನೆ ಮಾಡಲಿದ್ದಾರೆ. ಆರೋಪಿಗಳ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಎಸ್ ಪಿ ಪಿ ಪ್ರಸನ್ನ ಕುಮಾರ್ ಮಾಡಲಿದ್ದಾರೆ.
ಕರ್ನಾಟಕದಲ್ಲಿ ದರ್ಶನ್ ಅಭಿಮಾನಿಗಳ ಅಬ್ಬರ ಜೋರಾಗಿಯೇ ಇದೆ. ಹಲವು ಅಭಿಮಾನಿಗಳು ನೆಚ್ಚಿನ ನಟನನ್ನು ಮನಸ್ಸಿನಲ್ಲೇ ಆರಾಧಿಸುತ್ತಾರೆ. ಕೊಲೆ ಪ್ರಕರಣದಲ್ಲಿ 131 ದಿನ ಜೈಲಿನಲ್ಲಿದ್ದ ನಟ ದರ್ಶನ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನಿನ ಅವಧಿ ಕೂಡ ಅರ್ಧದಷ್ಟು ಮುಗಿಯುತ್ತಾ ಬಂದಿದೆ.