ಬೆಂಗಳೂರು ರೇಸ್ ಕೋರ್ಸ್ ಟರ್ಫ್ ಕ್ಲಬ್ ಮೇಲೆ ಸಿಸಿಬಿ ಇಂದು ದಾಳಿ ನಡೆಸಿದೆ ಇಪ್ಪತ್ತು ಪೊಲೀಸ್ ಸಿಬ್ಬಂದಿಗಳ ಗುಂಪು ರೇಸ್ ಕೋರ್ಸ್ ಗೆ ದಾಳಿ ಮಾಡಿದ ದಾಳಿಯಲ್ಲಿ ಹೆಚ್ಚಿನ ಮೊತ್ತದ ಹಣವನ್ನು ಸಿಸಿಬಿ ಪೊಲೀಸರು ಕಲೆ ಹಾಕಿದ್ದಾರೆ . ಹಾಗೂ ಸರ್ಕಾರಕ್ಕೆ ಜಿಎಸ್ಟಿ ಕಟ್ಟದೇ ಇದ್ದ ಎಷ್ಟೊಂದು ಫೈಲ್ಗಳು ದೊರಕಿವೆ ಹಾಗೂ 96 ಲಕ್ಷ ಹಣವನ್ನು ಸಿಸಿಬಿ ಪೊಲೀಸರು ಕಲೆಹಾಕಿದ್ದಾರೆ .
ರೇಸ್ ಕೋರ್ಸ್ ನಲ್ಲಿ ಇದ್ದ ಎಲ್ಲ ಬುಕ್ಕಿಗಳನ್ನು ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸಿದ್ದಾರೆ . ಟರ್ಫ್ ಕ್ಲಬ್ ಗೆ ಹಲವಾರು ಜನ ಬೆಟ್ಟಿಂಗ್ ಮಾಡಲು ಇಲ್ಲಿಗೆ ಬರುತ್ತಿದ್ದರೂ ಇದರಲ್ಲಿ ನಡೆಯುವ ಎಷ್ಟೋ ವ್ಯವಹಾರಗಳಲ್ಲಿ ಜಿಎಸ್ಟಿಯನ್ನು ಸರ್ಕಾರಕ್ಕೆ ಕಟ್ಟಿರಲಿಲ್ಲ ಅಂತ ಎಲ್ಲಾ ಹಣವನ್ನು ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ ಹಾಗೂ ಅಲ್ಲಿನ ನೌಕರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಇದ್ದಕ್ಕಿದ್ದಂತೆ ರೇಸ್ ಕೋರ್ಸ್ ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರನ್ನು ಕಂಡು ಸಿಬ್ಬಂದಿಗಳು ಕಂಗಾಲಾಗಿದ್ದರು ಎಂದು ಹೇಳಲಾಗುತ್ತಿದೆ .