ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಕೃಷಿ ಕಾಯ್ದೆಯ ವಿರುದ್ಧ ರೈತರು ದೆಹಲಿ ಗಡಿಗಳಲ್ಲಿ ಹಲವಾರು ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗುತ್ತಿದ್ದು ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ದಣಿದ ಹೋಗಿದೆ.
ದೆಹಲಿಯ ಘಾಜಿಪುರ್ ಗಡಿ , ಸಿಂಘು ಗಡಿ ಮತ್ತು ಟಿಕ್ರಿ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಬೇಕಂತಲೇ ಪವರ್ ಕಟ್ & ನೀರು ಸರಬರಾಜು ಸ್ಥಗಿತವನ್ನು ಮಾಡುತ್ತಿದ್ದು ರೈತರನ್ನ ಬೆದರಿಸಲು ಪ್ರಯತ್ನಿಸುತ್ತಿದೆ.
ಕೇಂದ್ರ ಸರ್ಕಾರ ನಡೆಸುತ್ತಿರುವ ಈ ಪಿತೂರಿಯಿಂದ ರೈತರಿಗೆ ಕುಡಿಯಲು, ಬಟ್ಟೆ ಒಗೆಯಲು ಮತ್ತು ಅಡುಗೆ ಮಾಡಿಕೊಳ್ಳಲು ನೀರಿನ ಸಮಸ್ಯೆ ಉಂಟಾಗುತ್ತಿದ್ದು , ವಿದ್ಯುತ್ ಸರಬರಾಜು ವ್ಯತ್ಯಯವಾಗುತ್ತಿರುವುದರಿಂದ ಶೌಚಾಲಯಕ್ಕೆ ಹೋಗುವುದಕ್ಕೆ ಕೂಡ ಸಮಸ್ಯೆ ಎದುರಾಗುತ್ತಿದೆ. ಇಷ್ಟೆಲ್ಲಾ ಆದರೂ ಸಹ ರೈತರು ಜಾಗ ಬಿಟ್ಟು ಕದಲದೆ ಪ್ರತಿಭಟನೆಯನ್ನು ಇನ್ನೂ ಚುರುಕುಗೊಳಿಸುತ್ತಿರುವುದು ಕಂಡುಬಂದಿದೆ..