ಹಲವಾರು ಹೋರಾಟದಲ್ಲಿ ಭಾಗವಹಿಸಿದ್ದ ರೈತರ ಮೇಲೆ ಮೊಕದ್ದಮೆಗಳು ದಾಖಲಾಗಿದ್ದವು ಆ ವಿಚಾರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲೇ ಒಂದು ಕಡೆ ಮಳೆಯಾಗದೆ ಬರ ಇದೆ, ಮತ್ತೊಂದು ಕಡೆ ನೆರೆ ಹಾವಳಿ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಮೊಕದ್ದಮೆಗಳಿಗೆ ಅಲೆಯಲು ಅವರಿಗೆ ಹಣಕಾಸಿನ ನೆರವು ಯಾರು ಕೊಡುತ್ತಾರೆ.
ತಿಂಗಳಿಗೆ ಎರಡೆರಡು ಬಾರಿ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆದಾಡುತ್ತಾ ಇದ್ದರೆ ರೈತರ ಪಾಡು ಏನಾಗಬಾರದು ಎಂದು ಪ್ರಶ್ನಿಸಿದರು. ಹೀಗಾಗಿ ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಮುಖಂಡರು ಮನವಿ ಮಾಡಿದೆವು. ಇದಕ್ಕೆ ಸಿಎಂ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದಕ್ಕಾಗಿ ನಾವು ಅವರಿಗೆ ವಿಶೇಷ ಅಭಿನಂದನೆ ತಿಳಿಸುವುದಾಗಿ ಹೇಳಿದರು.