ರೈತ ಪೊಲೀಸ್ ಅಧಿಕಾರಿಯಾದ ಸ್ಟೋರಿ..!

Date:

ತಾಪ್ ಆರ್. ದಿಘವ್ಕರ್. ಮುಂಬೈ ಪೊಲೀಸ್ ಡಿಪಾರ್ಟ್ ಮೆಂಟ್ನಲ್ಲಿ ಅಡಿಷನಲ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೈತನಾಗಿ ಬದುಕು ಆರಂಭಿಸಿದ್ರೂ ಸರ್ಕಾರಿ ಸೇವೆ ಸಲ್ಲಿಸಬೇಕು ಅನ್ನುವ ಆಸೆ ಮಾತ್ರ ದಿಘವ್ಕರ್ಗೆ ದೊಡ್ಡದಿತ್ತು.

ದಿಘವ್ಕರ್ ಅವರು ಹುಟ್ಟಿದ್ದು ನಾಶಿಕ್ ಬಳಿಯ ಲಿಟಾನಿಯಾ ಅನ್ನುವ ಚಿಕ್ಕ ಗ್ರಾಮದಲ್ಲಿ. ಆ ಗ್ರಾಮದಲ್ಲಿ ಇದ್ದಿದ್ದು ಒಂದು ಚಿಕ್ಕ ಶಾಲೆ. ಪುರುಷರ ಪ್ರಧಾನ ಕೆಲಸ ಅಂದ್ರೆ ಕೃಷಿ ಮಾಡುವುದು. ಆದ್ರೆ ಚಿಕ್ಕವಯಸ್ಸಿನಲ್ಲೇ ಸರ್ಕಾರಿ ಕೆಲಸ ಮಾಡಬೇಕು ಅನ್ನುವ ಕನಸು ಹೊತ್ತಿದ್ದರು. ಅದಕ್ಕಾಗಿ ಹಗಲು-ರಾತ್ರಿ ಅಧ್ಯಯನ ಮಾಡಿದರು. ಎಸ್ ಎಸ್ ಎ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲಿಗರಾದ್ರು.
ಶಾಲಾ ಶಿಕ್ಷಣ ಮುಗಿಸಿ, ಕಾಲೇಜಿಗೆ ಸೇರಿದ ದಿಘವ್ಕರ್ , ಮನೆಯಿಂದ ಕಾಲೇಜು 23 ಕಿಲೋಮೀಟರ್ ದೂರವಿದ್ದರೂ, ಒಂದೇ ಒಂದು ದಿನವೂ ಕಾಲೇಜ್ಗೆ ಚಕ್ಕರ್ ಹೊಡೆದಿರಲಿಲ್ಲ. ಪಿಯುಸಿಯಲ್ಲಿ ಶೇಕಡ 86 ರಷ್ಟು ಅಂಕ ಪಡೆದ್ರು. ಆದರೆ ಅವರಿಗೆ ಗ್ರಾಮಕ್ಕೆ ಹತ್ತಿರವಿದ್ದ ಕಾಲೇಜ್ನಲ್ಲಿ ಓದಲು ಅವಕಾಶ ಸಿಗಲಿಲ್ಲವಂತೆ. ಅದಕ್ಕಾಗಿ ಅವರ ತಂದೆಯವರು ಓದು ಬಿಟ್ಟು ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದ್ರರಂತೆ.
ದಿಘವ್ಕರ್. 16ನೇ ವರ್ಷಕ್ಕೆ ಸಂಪೂರ್ಣ ಕೃಷಿಕರಾದ್ರು. ಆದ್ರೆ ಓದಿನ ಬಗ್ಗೆ ಕನಸು ದೊಡ್ಡದಾಗಿತ್ತು. ಅಮ್ಮನ ಕೈಯಿಂದ 350 ರೂಪಾಯಿ ಪಡೆದುಕೊಂಡು ದೂರಶಿಕ್ಷಣ ಪ್ರೋಗ್ರಾಂ ಯೋಜನೆ ಅಡಿಯಲ್ಲಿ ಓದು ಮುಂದುವರೆಸಿದ್ರು. ಹಗಲು ಹೊತ್ತಿನಲ್ಲಿ ಕೃಷಿ ಕೆಲಸ. ರಾತ್ರಿ ಓದು. ಪದವಿ ಪಡೆಯಲು ಸಾಕಷ್ಟು ಶ್ರಮ ಪಟ್ಟೆಂತ್ರೆ. 18ನೇ ವರ್ಷದಲ್ಲಿ ಪದವಿ ಪಡೆದುಕೊಂಡ್ರು. ಓದಿಗಾಗಿ ಖರ್ಚಾಗಿದ್ದು ಕೇವಲ 1 ಸಾವಿರದ 250 ರೂಪಾಯಿ.
ಇನ್ನು ದಿಘವ್ಕರ್, ಪೊಲೀಸ್ ಸರ್ವೀಸ್ ಎಕ್ಸಾಂ ಮತ್ತು ಕಂಬೈನ್ಡ್ ಡಿಫೆನ್ಸ್ ಪರೀಕ್ಷೆಯಲ್ಲೂ ಪಾಸ್ ಆದ್ರು. 1987ರಲ್ಲಿ ಕೇವಲ 22ನೇ ವಯಸ್ಸಿನಲ್ಲಿ ಮುಂಬೈ ಪೊಲೀಸ್ ಡಿಪಾರ್ಟ್ ಮೆಂಟ್ನಲ್ಲಿ ಅಸಿಸ್ಟಂಟ್ ಕಮಿಷನ್ ಆಗಿ ಆಯ್ಕೆಯಾದ್ರು. ಆ ದಿನ ಅವರ ಪಾಲಿಗೆ ಅತ್ಯಂತ ಶ್ರೇಷ್ಠ ದಿನವಾಗಿತ್ತಂತೆ. ಅದನ್ನು ಇಂದಿಗೂ ನೆನೆಸಿಕೊಂಡು ಬದುಕಿನ ಮುಂದಿನ ಹೆಜ್ಜೆ ಇಡುತ್ತಿದ್ದಾರಂತೆ.


ನೋಡಿ, ದಿಘವ್ಕರ್ ಪೊಲೀಸ್ ಕೆಲಸಕ್ಕೆ ಸೇರಿಕೊಂಡ ಮೇಲೂ ಓದುವುದನ್ನು ನಿಲ್ಲಿಸಲಿಲ್ಲವಂತೆ. 1993ರ ಮುಂಬೈ ಬಾಂಬ್ ಸ್ಪೋಟದ ಬಳಿಕ ಪ್ರತಿದಿನ 18 ಗಂಟೆಗಳ ಕಾಲ ಕೆಲಸ ಮಾಡಿದ್ದರೂ ಓದುವುದನ್ನು ಮಾತ್ರ ಬಿಟ್ಟಿರಲಿಲ್ಲವಂತೆ. ಅದನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಓದುವುದನ್ನು ನಿಲ್ಲಿಸಿದರೆ ಬದುಕೇ ನಿಂತಂತೆ ಎನ್ನುತ್ತಾರೆ ಅವರು.
ಪೊಲೀಸರ ಕೆಲಸದ ಬಗ್ಗೆ ಅವರಿಗೆ ಎಲ್ಲಿಲ್ಲದೆ ಹೆಮ್ಮೆ. ಹಲವು ಜನರು ಪೊಲೀಸರನ್ನು ಬೇಕಾದಂತೆ ದೂರುತ್ತಾರೆ. ಆದ್ರೆ ನಾವು ನಮ್ಮ ಕೆಲಸ ಮಾಡುತ್ತೇವೆ ಅನ್ನೋದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಮನೆಗಳ ಹಬ್ಬ ಮತ್ತು ಇತರೆ ಸಮಾರಂಭಗಳನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ವರ್ಷದ 365 ದಿನವೂ ಕೆಲಸ ಮಾಡಬೇಕಾಗಿರುತ್ತದೆ. ಒತ್ತಡಗಳು ಕೂಡ ಇರುತ್ತದೆ. ಜನರು ನಮ್ಮ ಕಷ್ಟದ ಬಗ್ಗೆ ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಏನು ಅಂದುಕೊಳ್ಳುತ್ತಾರೋ ಹಾಗೇ ಯೋಚನೆ ಮಾಡುತ್ತಾರೆ ಅಂತ ಹೇಳ್ತಾರೆ ದಿಘವ್ಕರ್.
ಏನೇ ಹೇಳಿ, ದಿಘವ್ಕರ್ ಸಾಧನೆ ಮತ್ತು ಅವರ ಶ್ರಮ ಎಲ್ಲರಿಗೂ ಸ್ಪೂರ್ತಿ. ಕೃಷಿಕನಾಗಿದ್ದರೂ ಹಠ ಮತ್ತು ಶ್ರಮದಿಂದ ಎಲ್ಲವನ್ನು ಗೆಲ್ಲಬಹುದು ಅನ್ನೋದನ್ನ ದಿಘವ್ಕರ್ ಬದುಕಿನ ಅನುಭವಗಳಿಂದ ತಿಳಿದುಕೊಳ್ಳಬಹುದು ಅಲ್ಲವೇ?

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...