No menu items!
13.9 C
Munich
Wednesday, April 29, 2026

ಕೆಜಿಎಫ್ ಚಾಪ್ಟರ್2 ನಲ್ಲಿ ತೆಲುಗಿನ ಬಾಲಯ್ಯ?

Must read

ಕೆಜಿಎಫ್ ಚಾಪ್ಟರ್ 2 ಇಡೀ ದೇಶ ಕಾಯುತ್ತಿರುವಂತಹ ಚಿತ್ರ ಎಂದೇ ಹೇಳಬಹುದು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬ ಕಲಾವಿದನಿಗೂ ಸಹ ದೇಶದಾದ್ಯಂತ ಗುರುತಿಸುವಿಕೆ ಇದೆ. ಕೆಜಿಎಫ್ ಅಂತಹ ದೊಡ್ಡ ಚಿತ್ರದಲ್ಲಿ ಅಭಿನಯಿಸುವುದು ಹಲವಾರು ಕಲಾವಿದರ ಕನಸು ಸಹ ಹೌದು.

 

ಕೆಜಿಎಫ್ ಚಿತ್ರ ಹಿಟ್ ಆದ ನಂತರ ಅದರ ಎರಡನೇ ಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿತ್ತು. ಅದರಲ್ಲಿ ಹೊಸ ಕಲಾವಿದರ ಸೇರ್ಪಡೆ ಕೂಡ ಒಂದು. ಪ್ರಕಾಶ್ ರೈ, ಸಂಜಯ್ ದತ್ ಎರಡನೇ ಚಾಪ್ಟರ್ ನಲ್ಲಿ ಚಿತ್ರ ತಂಡವನ್ನು ಸೇರಿಕೊಂಡ ಕಲಾವಿದರು. ಇನ್ನು ಇವರ ಬಳಿಕ ಇದೀಗ ಮತ್ತೊಬ್ಬ ಸ್ಟಾರ್ ನಟ ಕೆಜಿಎಫ್ ಚಾಪ್ಟರ್2 ನಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಅದು ಬೇರೆ ಯಾರು ಅಲ್ಲ ತೆಲುಗಿನ ನಟ ಬಾಲಕೃಷ್ಣ. ಹೌದು ಗೂಗಲ್ ನಲ್ಲಿ ಕೆಜಿಎಫ್ ಚಾಪ್ಟರ್ 2ರ ತರ ಗಣವನ್ನು ಸರ್ಚ್ ಮಾಡಿದರೆ ಅಲ್ಲಿ ಬಾಲಕೃಷ್ಣ ಅವರ ಹೆಸರು ಸಹ ಸೇರಿಕೊಂಡಿರುವುದು ಕಣ್ಣಿಗೆ ಬೀಳಲಿದೆ.

 

ಹೌದು ಇನಾಯತ್ ಕಲೀಲ್ ಪತ್ರದಲ್ಲಿ ಬಾಲಕೃಷ್ಣ ಅಭಿನಯಿಸಲಿದ್ದಾರೆ ಎಂದು ಇಲ್ಲಿ ಬರೆಯಲಾಗಿದ್ದು ಇದು ಅಭಿಮಾನಿಗಳಲ್ಲಿ ಗೊಂದಲ ನನ್ನ ಮೂಡಸಿದೆ. ಬಾಲಕೃಷ್ಣ ನಿಜವಾಗಿಯೂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರಾ ಅಥವಾ ತಪ್ಪಾಗಿ ಈ ರೀತಿ ಅಪ್ಡೇಟ್ ಮಾಡಲಾಗಿದೆಯಾ ಎಂಬ ಗೊಂದಲ ಇದೀಗ ಎಲ್ಲರಲ್ಲಿಯೂ ಮೂಡಿದೆ. ಇನ್ನು ಈ ವಿಚಾರಕ್ಕೆ ತೆರೆಬೀಳಬೇಕಾದರೆ ಸ್ವತಃ ಹೊಂಬಾಳೆ ಫಿಲ್ಮ್ಸ್ ಅವರ ಈ ವಿಷಯದ ಕುರಿತು ಸ್ಪಷ್ಟನೆ ನೀಡಬೇಕು..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article