ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಚೆನ್ನೈಯಲ್ಲಿ ಮಾರ್ಚ್ 23ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿನೊಂದಿಗೆ ವೈಯಕ್ತಿಕ ದಾಖಲೆ ಬರೆಯುವ ಯೋಜನೆಯಲ್ಲಿದ್ದಾರೆ.
ಚೆನ್ನೈ ಪಂದ್ಯವನ್ನು ಗೆದುಕೊಳ್ಳುವುದೇ ಕೊಹ್ಲಿ ಬಳಗದ ಮೊದಲ ಗುರಿ. ಇದರೊಂದಿಗೆ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿದರೆ ವೈಯಕ್ತಿಕ ದಾಖಲೆಯೂ ಸೃಸ್ಟಿಯಾಗಲಿದೆ. ಆರಂಭಿಕ ಪಂದ್ಯದಲ್ಲಿ ಕೊಹ್ಲಿ ಕೇವಲ 37 ರನ್ ಗಳಿಸಿದರೂ ಸಾಕು; ಐಪಿಎಲ್‌ನಲ್ಲಿ ವೈಯಕ್ತಿಕ ಅತ್ಯಧಿಕ ರನ್‌ಗಾಗಿ ಕೊಹ್ಲಿ ಮೊದಲ ಸ್ಥಾನ ಆವರಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 4948 ರನ್ ಗಳಿಸಿರುವ ಕೊಹ್ಲಿ ವೈಯಕ್ತಿಕ ಅತ್ಯಧಿಕ ರನ್ ಗಳಿಸಿದವರಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ಒಟ್ಟು 4985 ರನ್‌ನೊಂದಿಗೆ ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೊಂದು ಗಮ್ಮತ್ತಿನ ಸಂಗತಿಯೆಂದರೆ ಚೆನ್ನೈ ಪಂದ್ಯದಲ್ಲಿ ಕೊಹ್ಲಿ ಆರ್‌ಸಿಬಿಯಿಂದ ಆರಂಭಿಕರಾಗಿ ಮೈದಾನಕ್ಕಿಳಿದರೆ ಅತ್ತ ರೈನಾ ಕೂಡ ಸಿಎಸ್‌ಕೆಯಿಂದ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.