ರೋಹಿಣಿ ಸಿಂಧೂರಿಗೆ ಸಂಕಷ್ಟ!

Date:

ಮೈಸೂರು: ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಂದು ಕಡೆ ಶಾಸಕ ಸಾರಾ ಮಹೇಶ್, ಡಿಸಿ ಅಧಿಕೃತ ಸರಕಾರಿ ನಿವಾಸ ನವೀಕರಣ ಸಂಬಂಧ ನೀಡಿದ್ದ ದೂರಿನ ವಿಚಾರಣೆಗೆ ಆದೇಶವಾಗಿದ್ದರೆ ಮತ್ತೊಂದು ಕಡೆ ಚಾಮರಾಜನಗರದಲ್ಲಿನ ನಡೆದಿದ್ದ ಆಕ್ಸಿಜನ್ ಸಾವು ಪ್ರಕರಣದಲ್ಲಿ ದೂರ ದಾಖಲಿಸಲು ಮನವಿ ಸಲ್ಲಿಕೆಯಾಗಿದೆ.

ಮೈಸೂರು ಜಿಲ್ಲಾಧಿಕಾರಿ ಅಧಿಕೃತ ಸರಕಾರಿ ನಿವಾಸದ ನಡೆದಿದ್ದೆ ಎನ್ನಲಾಗುತ್ತಿರುವ ನವೀಕರಣ ವಿಚಾರದಲ್ಲಿ ತನಿಖೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಪ್ರಾದೇಶಿಕ ಆಯುಕ್ತರಿಗೆ ತನಿಖೆಗೆ ಆದೇಶಿಸಿದ್ದಾರೆ.

ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಇಲ್ಲದೆ ಕಟ್ಟಡ ನವೀಕರಿಸಿ ನಿವಾಸದ ನೆಲ ಹಾಸಿಗೆಯ ನವೀಕರಣದ ಮಾಡಲಾಗಿದೆ ಎಂದು ಶಾಸಕ ಸಾರಾ ಮಹೇಶ್ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿ 7 ದಿನಗಳ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿಯಿಂದ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ಬಂದಿದೆ.

ಇನ್ನೊಂದೆಡೆ ಚಾಮರಾಜನಗರ ಆಕ್ಸಿಜನ್ ದುರಂತ ಪ್ರಲರಣದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತನಿಖಾಧಿಕಾರಿಗೆ ಚಾಮರಾಜನಗರದ ಮುಖಂಡ ಮಲ್ಲೇಶ್ ದೂರು ನೀಡಿದ್ದಾರೆ. ಅಫಿಡವಿಟ್ ಮಾಡಿಸಿದ ಮನವಿ ಪತ್ರ, ಪೆನ್‍ಡ್ರೈವ್ ಅನ್ನು ಆಕ್ಸಿಜನ್ ದುರಂತದ ತನಿಖೆಗಾಗಿ ಸರ್ಕಾರ ನೇಮಕ ಮಾಡಿರುವ ಬಿ.ಎ.ಪಾಟೀಲ್ ಸಮಿತಿಗೆ ಹಸ್ತಾಂತರಿಸಿದ್ದಾರೆ.

ಮುಖಂಡ ಮಲ್ಲೇಶ್ ಮಾತನಾಡಿ, ಐಪಿಸಿ ಕಾಯ್ದೆ 302 ಅಡಿಯಲ್ಲಿ ರೋಹಿಣಿ ಸಿಂಧೂರಿ ವಿರುದ್ದ ಕೊಲೆ ಪ್ರಕರಣ ದಾಖಲಿಸಬೇಕು. ಅವರ ಸ್ವತ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮೃತ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

 

Share post:

Subscribe

spot_imgspot_img

Popular

More like this
Related

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...

ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು, 27ಕ್ಕೂ ಹೆಚ್ಚು ಮಂದಿ ಗಾಯ

ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು,...

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...