ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡದ ಆರಂಭಿಕರಾಗಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಣಕ್ಕಿಳಿದು ಅತ್ಯುತ್ತಮ ಪ್ರದರ್ಶನ ನೀಡಿದರು. ಇದು ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತು. ಈ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಆರಂಭಿಕನಾಗಿ ಮುಂದುವರಿಯುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.
ಆದರೆ ಟಿ20 ಕ್ರಿಕೆಟ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟ್ಸ್‌ಮನ್ ಆಗಿರುವ ಕೆಎಲ್ ರಾಹುಲ್ ಸ್ಥಾನದ ಬಗ್ಗೆ ಈಗ ಪ್ರಶ್ನೆಗಳು ಮೂಡಲು ಆರಂಭಿಸಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಕೆಎಲ್ ರಾಹುಲ್‌ಗೆ ತಂಡದಿಂದಲೇ ಗೇಟ್‌ಪಾಸ್ ನೀಡಲಾಗುತ್ತದೆಯೇ ಎಂಬ ಅನುಮಾನಗಳು ಅಭಿಮಾನಿಗಳಲ್ಲಿ ವ್ಯಕ್ತವಾಗುತ್ತಿದೆ.
ಆದರೆ ಇದಕ್ಕೆ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸ್ಪಷ್ಟನೆಯನ್ನು ನೀಡಿದ್ದಾರೆ. ರಾಹುಲ್ ಅವರ ಪಾತ್ರವನ್ನು ರೋಹಿತ್ ಶರ್ಮಾ ವಿವರಿಸಿದ್ದಾರೆ.
ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿಚಾರವಾಗಿ ಅದೊಂದು ರಣತಂತ್ರವಾಗಿತ್ತು ಎಂದು ವಿವರಿಸಿದ್ದಾರೆ. “ಅಂತಿಮ ಪಂದ್ಯದಲ್ಲಿ ಒಂದು ಹೆಚ್ಚುವರಿ ಬೌಲರ್ ಜೊತೆಯಲ್ಲಿ ಕಣಕ್ಕಿಳಿಯುವುದು ನಮ್ಮ ಯೋಜನೆಯಾಗಿತ್ತು. ಹಾಗಾಗಿ ದುರದೃಷ್ಟವಶಾತ್ ಕೆಎಲ್ ರಾಹುಲ್ ಹೊರಗುಳಿಯಬೇಕಾಯಿತು” ಎಂದು ರೋಹಿತ್ ಶರ್ಮಾ ಹೇಳಿದರು.
ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಸರಣಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ರಾಹುಲ್, 1, 0, 0, 14 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಈ ಕಾರಣಕ್ಕಾಗಿ ರಾಹುಲ್ ಅವರನ್ನು ಹೊರಗಿಟ್ಟಿಲ್ಲ ಎಂದು ವಿವರಿಸಿದರು ರೋಹಿತ್ ಶರ್ಮಾ.
“ಸೀಮಿತ ಓವರ್‌ಗಳಲ್ಲಿ ರಾಹುಲ್ ನಮ್ಮ ತಂಡದ ಪ್ರಮುಖ ಆಟಗಾರ, ವಿಶೇಷವಾಗಿ ಟಿ20 ಮಾದರಿಯಲ್ಲಿ. ಪ್ರಸಕ್ತ ಫಾರ್ಮ್‌ನಲ್ಲಿ ಅತ್ಯುತ್ತಮ ಆಡುವ ಬಳಗದಲ್ಲಿ ಕಣಕ್ಕಿಳಿಯಲು ಮ್ಯಾನೇಜ್‌ಮೆಂಟ್ ನಿರ್ಧರಿಸಿತು. ಆದರೆ ಇದು ಕೇವಲ ಒಂದು ಪಂದ್ಯಕ್ಕೆ ಮಾತ್ರ, ಇದರಿಂದಾಗಿ ಕೆಎಲ್ ರಾಹುಲ್ ಅವರನ್ನು ಪರಿಗಣಿಸಲಾಗುವುದಿಲ್ಲ ಎಂಬ ಸಂಕೇತವನ್ನು ರವಾನಿಸುವುದಿಲ್ಲ” ಎಂದಿದ್ದಾರೆ ರೋಹಿತ್ ಶರ್ಮಾ.
“ವಿಶ್ವಕಪ್‌ನ ಸಮೀಪಕ್ಕೆ ತಲುಪುತ್ತಿದ್ದಂತೆಯೇ ವಿಷಯಗಳು ಬದಲಾವಣೆಯಾಗಬಹುದು. ಆರಂಭಿಕನಾಗಿ ರಾಹುಲ್ ಅವರ ಸಾಮರ್ಥ್ಯ ಹಾಗೂ ಕೊಡುಗೆಯನ್ನು ಮತ್ತು ನಮಗಾಗಿ ಅವರು ಏನು ಮಾಡಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾನು ಏನನ್ನೂ ತಳ್ಳಿಹಾಕಲ್ಲ, ಜೊತೆಗೆ ವಿಶ್ವಕಪ್‌ಗೆ ಇದೇ ನಮ್ಮ ಆದ್ಯತೆಯ ತಂಡವಾಗಿದೆ ಎಂಬುದನ್ನು ಹೇಳುವುದಿಲ್ಲ” ಎಂದಿದ್ದಾರೆ ರೋಹಿತ್ ಶರ್ಮಾ
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗ 1-2 ಅಂತರದಿಂದ ಹಿನ್ನಡೆಯಲ್ಲಿದೆ. ನಾಲ್ಕನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರಷ್ಟೇ ಸರಣಿ ಜೀವಂತವಾಗುಳಿಯಲು ಸಾಧ್ಯ. ಈ ಮಧ್ಯೆ ಭಾರತಕ್ಕೆ ಆರಂಭಿಕ ಆಟಗಾರ ಕೆಎಲ್ ರಾಹುಲ್ ಫಾರ್ಮ್ ಕೊರತೆ ಸಾಕಷ್ಟು ಕಾಡುತ್ತಿದೆ. ಇದಕ್ಕೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಸಲಹೆಯೊಂದನ್ನು ನೀಡಿದ್ದು ಇದು ಈ ಹಿಂದೆ ಕೆಲಸ ಮಾಡಿದೆ ಎಂಬುದನ್ನು ಸಾಕ್ಷ್ಯ ಸಹಿತ ವಿವರಿಸಿದ್ದಾರೆ.
ಹಿಂದೆ 2014ರಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದರು. ಈ ಸರಣಿಯ ಮುಕ್ತಾಯದ ಬಳಿಕ ಮುಂದಿನ ಸರಣಿಯಲ್ಲಿ ನಾಯಕ ಎಂಎಸ್ ಧೋನಿ ವಿರಾಟ್ ಬೆಂಬಲಕ್ಕೆ ನಿಂತು ಬದಲಾವಣೆಯೊಂದನ್ನು ಮಾಡಿದ್ದರು. ಇದಲ್ಲಿ ವಿರಾಟ್ ಕೊಹ್ಲಿ ಯಶಸ್ಸು ಸಾಧಿಸಿ ಬಳಿಕ ಫಾರ್ಮ್‌ಗೆ ಮರಳಲು ಸಾದ್ಯವಾಯಿತು. ಇದೇ ತಂತ್ರವನ್ನು ರಾಹುಲ್‌ಗೆ ಅನ್ವಯಿಸಲಿ ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.
ಕೆಎಲ್ ರಾಹುಲ್ ಫಾರ್ಮ್ ಕಳೆದುಕೊಂಡಿರುವ ಕಾರಣ ಮತ್ತೆ ಫಾರ್ಮ್‌ಗೆ ಮರಳಲು ಕೆಲವೊಮ್ಮೆ ಸಣ್ಣ ಬದಲಾವಣೆಗಳು ಮಾಡಿಕೊಂಡರೆ ಸಾಕಾಗುತ್ತದೆ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. “ಇಶಾನ್ ಕಿಶಣ್ ರಾಹೂ ರೋಹಿತ್ ಶರ್ಮಾ ಆರಂಬಿಕರಾಗಿ ಕಣಕ್ಕಿಳಿಯಲಿ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಹಾಗೂ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿ. ಈ ಸಣ್ಣ ಬದಲಾವನೆಯಿಂದ ರಾಹುಲ್ ಫಾರ್ಮ್‌ಗೆ ಮರಳಬಹುದು” ಎಂದು ಚೋಪ್ರ ಹೇಳಿದ್ದಾರೆ.
ಇನ್ನು ಆಕಾಶ್ ಚೋಪ್ರ ಹಾಲಿ ನಾಯಕ ವಿರಾಟ್ ಕೊಹ್ಲಿ ಈ ಹಿಂದೆ 2014ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದು ಸತತವಾಗಿ ವೈಫಲ್ಯವನ್ನು ಅನುಭವಿಸಿದ್ದರು. ಹಿಂದೆಂದೂ ಕಾಣದ ಕಳಪೆ ಪ್ರದರ್ಶನದ ನಂತರ ಮುಂದೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿಗೆ ನಾಯಕ ಧೋನಿ ಬೆಂಬಲವಾಗಿ ನಿಂತಿದ್ದರು. ವಿಂಡೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ 2 ರನ್‌ಗಳಿಸಿ ಕೊಹ್ಲಿ ವಿಕೆಟ್ ಒಪ್ಪಿಸಿದ್ದರು.