ಸೌಥಾಂಪ್ಟನ್ ನಲ್ಲಿ ಶನಿವಾರ ಭಾರತ ತಂಡ ಅಭ್ಯಾಸ ನಡೆಸಿತ್ತು. ಅಭ್ಯಾಸದ ವೇಳೆ ಕೊಹ್ಲಿ ಅವರ ಬಲಗೈ ಹೆಬ್ಬರಳಿಗೆ ಗಾಯವಾಗಿದ್ದಾಗಿ ಹೇಳಲಾಗಿದ್ದು, ಅದು ಬ್ಯಾಟಿಂಗ್ ಮಾಡುವಾಗ ಆಯಿತೋ, ಫೀಲ್ಡಿಂಗ್ ವೇಳೆ ಆಯಿತೋ ಎಂದು ಸ್ಪಷ್ಟವಾಗಿಲ್ಲ. ಅಭ್ಯಾಸ ಮುಗಿದ ಬಳಿಕ ಕೊಹ್ಲಿ ಕಪ್ ಒಂದರಲ್ಲಿ ನೀರು ತುಂಬಿಕೊಂಡು ಅದರೊಳಗೆ ಹೆಬ್ಬರಳು ಅದ್ದಿಕೊಂಡು ಡ್ರೆಸ್ಸಿಂಗ್ ರೂಂ ಕಡೆ ಹೋಗಿದ್ದು, ಈ ಬಗ್ಗೆ ಬಿಸಿಸಿಐನಿಂದ ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ.
ಇನ್ನು ವಿಜಯ್ ಶಂಕರ್ ಅವರು ಅಭ್ಯಾಸದ ವೇಳೆಮೊಣಕೈಗೆ,ಗಾಯಮಾಡಿಕೊಂಡಿದ್ದರು. ಇದರಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಿಂದ ದೂರ ಉಳಿದಿದ್ದರು. ಆಲ್ ರೌಂಡರ್ ಕೇದಾರ್ ಜಾದವ್ ಸಹ ಭುಜಕ್ಕೆ ಗಾಯಮಾಡಿಕೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.