ಬೆಳಗಾವಿಯ ಹೆಲಿಪ್ಯಾಡ್‍ನಿಂದ ಸಿಎಂ ಯಡಿಯೂರಪ್ಪನವರು ಇಂದು ಬೆಳಗ್ಗೆ ಸಾಂಗ್ಲಿ ಸಂಖ್‍ಗೆ ತೆರಳಬೇಕಿತ್ತು. ಅಲ್ಲಿಂದ ಅಕ್ಕಲಕೋಟ್, ಲಾತೂರ್, ಚಕೂರ್, ಸೊಲ್ಲಾಪುರ ಜಿಲ್ಲೆಗಳಲ್ಲಿ ಮತ ಪ್ರಚಾರ ನಡೆಸಬೇಕಾಗಿತ್ತು.
ಹೀಗಾಗಿ ನಿನ್ನೆ ಸಂಜೆ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ 8.30ಕ್ಕೆ ಜಿಲ್ಲಾ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಸಾಂಗ್ಲಿ ಕಡೆ ಹೊರಡಬೇಕಿತ್ತು.
ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಟೇಕಾಫ್ ಆಗಲು ಅಧಿಕಾರಿಗಳ ಅನುಮತಿ ಕೊಡಲಿಲ್ಲ.ಹೆಲಿಕಾಪ್ಟರ್ ಕೈ ಕೊಟ್ಟ ಕಾರಣ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಅಧಿಕಾರಿಗಳ ವಿರುದ್ಧ ಯಡಿಯೂರಪ್ಪ ಗರಂ ಆಗಿದ್ದಾರೆ ಎನ್ನಲಾಗುತ್ತಿದೆ .