ಪ್ರೀತಿ ಮಾಯೆ ಹುಷಾರು ಅಂತಾರೆ…ಹೀಗೆ ಪ್ರೀತಿ ಬಲೆಯಲ್ಲಿ ಬಿದ್ದ ಸ್ವಾಮೀಜಿಯೊಬ್ಬರು ಪೀಠ ತ್ಯಾಗ ಮಾಡಿದ್ದಾರೆ…
ಕೊಪ್ಪಳದ ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರೀತಿ ಬಲೆಗೆ ಬಿದ್ದು ಪೀಠ ತ್ಯಾಗ ಮಾಡಿದವರು. ಸ್ವಾಮೀಜಿ ಕಳೆದ ಜನವರಿ ತಿಂಗಳಲ್ಲಿ ಪೀಠ ತ್ಯಾಗ ಮಾಡಿ ಕಾಣೆಯಾಗಿದ್ದರು. ಈಗ ಅವರು ತನ್ನ ಪ್ರಿಯತಮೆ ಜೊತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಫೋಟೋ ವೈರಲ್ ಆಗಿದೆ.
ಮುಂಡರಗಿ ಕಾಲೇಜಿಗೆ ಪಾಠ ಮಾಡಲು ಹೋಗುತ್ತಿದ್ದ ಸ್ವಾಮೀಜಿಗೆ ಅಲ್ಲಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ಲವ್ ಆಗಿದೆ. ನಂತರ ಅವರು ಪೀಠ ತ್ಯಾಗ ಮಾಡಿದ್ದಾರೆ. ಆಡಳಿತ ಮಂಡಳಿ ಸ್ವಾಮಿಗಳು ವೈಯಕ್ತಿಕ ಕಾರಣದಿಂದ ಪೀಠ ತ್ಯಾಗ ಮಾಡಿದ್ದಾರೆ ಎಂದು ಹೇಳಿತ್ತು….